ಮಾದನಹಿಪ್ಪರಗಾ-ಮೈಂದರ್ಗಿ ರಸ್ತೆಯಲ್ಲಿ ಅಪಘಾತ ದಂಪತಿ ಸಾವು

IMG-20240513-WA0066
Published on



ಆಳಂದ: ಮಾದನಹಿಪ್ಪರಗಾ-ಮೈಂದರ್ಗಿ ಮಧ್ಯೆ ಸೋಮವಾರ ಮಧ್ಯಾಹ್ನ ದ್ವಿಚಕ್ರ ಮತ್ತು ಪಿಕಪ್ ವಾಹನ ಮಧ್ಯೆ ಡಿಕ್ಕಿಯಾಗಿ ದಂಪತಿ ಮೃತಪಟ್ಟಿದ್ದಾರೆ. ಮಾದನಹಿಪ್ಪರಗಾದ ಗುರುಸಿದ್ದಯ್ಯ ಮಠಪತಿ (೩೫), ಮಧುಮತಿ ಮಠಪತಿ (೩೦) ಮೃತರು. ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮದುವೆಯಾಗಿ ೬ ವರ್ಷವಾಗಿದ್ದು, ಅನ್ಯೂನ್ಯವಾಗಿ ಜೀವನ ನಡೆಸುತ್ತಿದ್ದರು. ಮಧುಮತಿ ಅವರನ್ನು ಸೊಲ್ಲಾಪುರ ಹತ್ತಿರದ ತವರೂರಿಗೆ ಬಿಟ್ಟು ಬರಲು ಬೈಕ್‌ನಲಿ ಹೊರಟಿದ್ದಾಗ ಮಾದನಹಿಪ್ಪರಗಿಯಿಂದ ಒಂದು ಕಿಮೀ ದೂರದಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ತೀವ್ರ ಪೆಟ್ಟಾಗಿದ್ದರಿಂದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕುಟುಂಬದವರು ಹಾಗೂ ತಂದೆ-ತಾಯಿ ಕಳೆದುಕೊಂಡ ಕಂದಮ್ಮಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಪಿಕಪ್ ಚಾಲಕ ಪರಾರಿಯಾಗಿದ್ದಾನೆ. ಪಿಎಸ್‌ಐ ವೀರೇಶ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net