ಬುಲೆರೋ ವಾಹನ ಪಲ್ಟಿ, ಇಬ್ಬರು ಸಾವು

Published on

ರಾಣೆಬೆನ್ನೂರ: ಬುಲೆರೋ ಗೂಡ್ಸ್ ವಾಹನ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲ ಜಿಲ್ಲೆ ಮಂತ್ರಾಲಯ ತಾಲೂಕಿನ ಮುಚ್ಚಿಗೇರಿ ಗ್ರಾಮದ ಬಸವ ತಂದೆ ಚಿನ್ನಮಾರಪ್ಪ (34) ಹಾಗೂ ಹನುಮಂತ ತಂದೆ ಬಾಪೂಡಿ (45) ಮೃತ ದುರ್ದೈವಿಗಳು.
ಬುಲೆರೋ ಚಾಲಕ ಎದುರಿನ ವಾಹನ ಓವರ್‌ಟೇಕ್ ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದಾಗಿ ವಾಹನದಲ್ಲಿ ಕುಳಿತ್ತಿದ್ದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net