

ಚನ್ನಪಟ್ಟಣ
ತಾಲೂಕಿನ ಬೈರಾಪಟ್ಟಣ ಬಳಿಯ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಮೈಸೂರು ಮೂಲದ ಸೋಮಲಿಂಗಪ್ಪ (70) ಶಿವಲಿಂಗಪ್ಪ ( 66) ಹಾಗೂ ಧಾರವಾಡ ಮೂಲದ ರಾಜೇಶ್ವರಿ (60) ಮೃತ ದುರ್ಧೈವಿಗಳು. ಇವರು ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ (ಟಿಟಿ ಗಾಡಿ) ಹಾಗೂ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ.
ಹಾವೇರಿಯಲ್ಲಿ ಶುಕ್ರವಾರ ನಡೆದ ಮದುವೆ ಸಮಾರಂಭ ಮುಗಿಸಿಕೊಂಡು ಮೈಸೂರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ.
ಮೈಸೂರಿನ ವರ ಹಾಗೂ ಹಾವೇರಿಯ ವಧುವಿನ ಮದುವೆ ಹಾವೇರಿಯಲ್ಲಿ ಶುಕ್ರವಾರ ನಡೆದಿತ್ತು. ಮದುವೆ ಮುಗಿಸಿಕೊಂಡು ನವದಂಪತಿಗಳು ಸೇರಿದಂತೆ ಎಲ್ಲರೂ ವಾಪಸ್ ಮೈಸೂರಿಗೆ ಹೋಗುವಾಗ ಶನಿವಾರ ಬೆಳಿಗ್ಗೆ 1 ಗಂಟೆಗೆ ಸುಮಾರಿನಲ್ಲಿ ಈ ಅನಾಹುತ ನಡೆದಿದೆ.
ಅಪಘಾತದಲ್ಲಿ ವಧು ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಮೃತ ದೇಹಗಳನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದು , ಗಾಯಾಳುಗಳು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ