

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡದ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಪಂಚಾಯಿತಿ ಶೇ.25 ನಿಧಿಯಿಂದ ಅಪಘಾತ ವಿಮಾ ಪಾಲಿಸಿ ಮಾಡಿಕೊಡುವ ಬಗ್ಗೆ ನೋಂದಣಿ ಶಿಬಿರ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆಯಿತು.
ಗ್ರಾಪಂ ಅಧ್ಯಕ್ಷೆ ಶಾಲಿನಿ ಕೆ.ಸಾಲ್ಯಾನ್ ಚಾಲನೆ ನೀಡಿದರು. ಸದಸ್ಯೆ ಜಯಲಕ್ಷ್ಮೀ, ಅಂಚೆ ಇಲಾಖೆ ಸಿಬ್ಬಂದಿ ಶಿವಪ್ರಸಾದ್, ಗ್ರಾಮ ಒನ್ನ ಸುದರ್ಶನ್, ಫಲಾನುಭವಿಗಳು, ಸಿಬ್ಬಂದಿ ಇದ್ದರು. ಪಿಡಿಒ ರೋಹಿಣಿ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕ ರಮೇಶ್ ವಂದಿಸಿದರು.