

ದಾವಣಗೆರೆ: ಬುಲೇರೋ ವಾಹನ ಹರಿದು ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀಕಾಂತ ಟಾಕೀಸ್ ಮುಂಭಾಗ ನಡೆದಿದೆ.
ಬೆಳ್ಳೂಡಿ ಗ್ರಾಮದ ನವೀನ್(20) ಮೃತ ಯುವಕ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಬುಲೆರೋ ವಾಹನ ಯುವಕನ ಮೇಲೆ ಹರಿದು ಎಳೆದೊಯ್ದಿದೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.