ಸಾವಿನ ನೋವಿನಲ್ಲೂ ಕಣ್ಣು ದಾನ ಮಾಡಿದ ಕುಟುಂಬ

accident death family denoted eye
Published on

ಸಿದ್ದಾಪುರ:ಅಪಘಾತದಿಂದ ಗಾಯಗೊಂಡು ಮೃತಪಟ್ಟ ವ್ಯಕ್ತಿಯ ಕಣ್ಣು ಗಳನ್ನು ಕುಟುಂಬ ದಾನ ಮಾಡಿ ಮಾದರಿಯಾಗಿದೆ.

ದೊಡ್ಡಗದ್ದೆ ಗ್ರಾಮದ ಪರಮೇಶ್ವರ ನಾಯ್ಕ ಚಂದ್ರಘಟಗಿ ಮಂಗಳವಾರ ಸಿದ್ದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರ ಕಣ್ಣುಗಳನ್ನು ಶಿರಸಿಯ ಗಣೇಶ ನೇತ್ರಾಲಯಕ್ಕೆ ದಾನ ಮಾಡಲಾಗಿದೆ.

ಜನವರಿಯಲ್ಲಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪರಮೇಶ್ವರ ನಾಯ್ಕ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಚ ಚೇತರಿಸಿಕೊಂಡ ಬಳಿಕ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದೇ ಅವರು ಮಂಗಳವಾರ ಮೃತಪಟ್ಟರು. ಕುಟುಂಬದ ನಿರ್ಣಯದಂತೆ ಅವರ ಕಣ್ಣುಗಳನ್ನು ದಾನ ಮಾಡಲಾಯಿತು ಎಂದು ಮೃತರ ಸಹೋದರ ವಿನಾಯಕ ದೊಡ್ಡಗದ್ದೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net