More

    ಭಾರಿ ಮಳೆಗೆ ಮುಳುಗಿದ ಭಟ್ಕಳ, ಕಾರವಾರ

    ಕಾರವಾರ: ಮಂಗಳವಾರ ಭಾರಿ ಮಳೆಯಿಂದ ಕಾರವಾರ ಹಾಗೂ ಭಟ್ಕಳದಲ್ಲಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ.

    ಭಟ್ಕಳದಲ್ಲಿ ಸೋಮವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗದ್ದರೆ ಕಾರವಾರದಲ್ಲಿ ಮಂಗಳವಾರ ಸಾಯಂಕಾಲದಿಂದ ಮಂಗಳವಾರ ಸಾಯಂಕಾಲದಿಂದ ಮಳೆ ಜೋರಾಗಿದೆ.

    ಸಾಯಂಕಾಲ 5.30 ರ ಹೊತ್ತಿಗೆ ಪ್ರಾರಂಭವಾದ ಮಳೆ 8 ಗಂಟೆಯವರೆಗೂ ಮುಂದುವರಿದಿದೆ. ಪರಿಣಾಮ ಕಾರವಾರ ಹಬ್ಬುವಾಡ ಬಳಿ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ವ್ಯತ್ಯಯವಾಗಿದೆ. ಹೈಚರ್ಚ್ ರಸ್ತೆ, ಗ್ರೀನ್ ಸ್ಟ್ರೀಟ್‌ನಲ್ಲಿ ನೀರು ತುಂಬಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರಗಾ, ಚೆಂಡಿಯಾ, ಭಾಗದಲ್ಲಿ ನೀರು ತುಂಬಿದೆ.

    ಮಳೆ ಭಟ್ಕಳ ಜಲಾವೃತ:

    ಭಟ್ಪಕಳ ಪಟ್ಟಣದ ಶಂಸುದ್ದೀನ ಸರ್ಕಲ್ ಜಲಾವೃತಗೊಂಡಿದ್ದು, ರಂಗಿನಕಟ್ಟೆಯ . ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬ್ಲಾಕ್ ಆಗಿದೆ. ಪಟ್ಟಣದ ಹೆದ್ದಾರಿ ಬದಿಯ ಮಾರುತಿ ನಗರ, ಭೈಪಾಸನಲ್ಲೂ ಚರಂಡಿಯಲ್ಲಿ ನೀರು ನಿಂತು ಅದರ ಸುತ್ತಲಿನ ಪ್ರದೇಶವಾರ, ನೆಹರು ರಸ್ತೆ, ವಿ.ವಿ. ರಸ್ತೆಯಲ್ಲೂ ನೀರು ತುಂಬಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದಲ್ಲೂ ಇದೆ ಸಮಸ್ಯೆ ಮುಂದುವರೆದಿದ್ದೂ ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಭಾರಿ ಮಳೆ ಮುನ್ಸೂಚನೆ:

    ಜುಲೈ 5 ರಂದು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್ ಘೋಷಣೆ ಮಾಡಿದೆ. 200 ಮಿಮೀಗಿಂತಲೂ ಅಧಿಕ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಜು.6, 7 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಜು. 8 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜು.5 ರಂದು ಅಽಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮುನ್ನೆಚ್ಚರಿಕೆ ವಹಿಸಬೇಕು. ಅಪಾಯದ ಮುನ್ಸೂಚನೆ ಇದ್ದಲ್ಲಿ ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದ್ದಾರೆ.

    ಮಳೆಯ ಪ್ರಮಾಣ:

    ಮಂಗಳವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 120.6, ಭಟ್ಕಳ-126, ದಾಂಡೇಲಿ-5.4, ಹಳಿಯಾಳ-2.4, ಹೊನ್ನಾವರ-88.2, ಜೊಯಿಡಾ-11.4, ಕಾರವಾರ-72.4, ಕುಮಟಾ-127, ಮುಂಡಗೋಡ-20, ಶಿರಸಿ-17, ಯಲ್ಲಾಪುರ-19.4 ಮಿಮೀ ಮಳೆಯಾಗಿದೆ.
    ಮರ ಬಿದ್ದು ಹಾನಿ:
    ಭಾರಿ ಗಾಳಿ, ಮಳೆಗೆ ಹೊನ್ನಾವರ ಪ್ರಭಾತ ನಗರದ ಪ್ರಕಾಶ ಮೇಸ್ತ ಅವರ ಮನೆಯ ಮೇಲೆ, ಮಾಳ್ಕೋಡ ಗ್ರಾಮದ ಮಣಿಕಂಠ ನಾಯ್ಕ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು, ಹಾನಿಯಾಗಿದೆ.

    ಸಾರ್ವಜನಿಕರ ಅಸಮಾಧಾನ:

    ಪಟ್ಟಣದ ಹೃದಯಭಾಗ ಭಟ್ಕಳದ ಶಂಸುದ್ದೀನ ಸರ್ಕಲ್‌ ಜೋರು ಮಳೆ ಸುರಿದರೆ ಸಾಕು ಕೃತಕ ಕೆರೆಯಂತಾಗುತ್ತದೆ. ಪ್ರತಿದಿನ ಸವಿರಾರು ಜನರು ಸಂಚರಿಸುವ, ಸರ್ಕಲ್ ಇದಾದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಿಸಿದ ಇಲಾಖೆ ಮುಂದಾಗುತ್ತಿಲ್ಲ ಎನ್ನುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ:ತಪಸ್ಸಿನಿಂದ ಮನಸ್ಸು ವಿಶಾಲ

    ತಾಲೂಕಾಡಳಿತದ ಅಧಿಕಾರಿಗಳು ಸರ್ಕಾರಿ ವಾಹನದಲ್ಲಿ ತಿರುಗಾಡುತ್ತಾರೆ, ಅವರಿಗೆ ಸಾಮಾನ್ಯ ಜನರ ಪಾಡು ಅರ್ಥವಾಗುವದಿಲ್ಲ. ಅವರು ಕೂಡ ಈ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸಲಿ, ಆಗಲಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ಜನರು ಪಟ್ಟು ಹಿಡಿದ ಪ್ರಕರಣವೂ ನಡೆಯಿತು.

    ಕಳೆದಾ ಬಾರಿ ಆಗಷ್ಟನಲ್ಲಿ ನಡೆದ ಅನಾಹುತದ ಬಳಿಕವೂ ಪುರಸಭೆ ಸೂಕ್ತ ನೀರು ಹರಿದು ಹೋಗಲು ಅವಕಾಶ ಕಲ್ಪಿಸದೆ ಇರುವದು ಅಧಿಕಾರಿಗಳಿಗೆ ಮತ್ತು ಪುರಸಭೆ ಸದಸ್ಯರಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ.


    ಪ್ರತಿವರ್ಷ ಇದೆ ಸಮಸ್ಯೆ ಎದುರಾಗುತ್ತಿದ್ದರೂ ತಾಲೂಕಾಡಳಿತ ಎಚ್ಚತ್ತುಕೊಳ್ಳದಿರುವದಕ್ಕೆ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
    ರಾಷ್ಟ್ರೀಯ ಹೆದ್ದಾರಿ 66 ನ್ನು ವಿಸ್ತರಿಸುವ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಅವೈಜ್ಞಾನಿಕ ಕಾರ್ಯಗಳಿಂದ ರಸ್ತೆ ಬದಿಯ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಯಾವಾಗ ನೀರು ತುಂಬುತ್ತದೆಯೋ ಎಂದು ಆತಂಕದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts