More

    ತಪಸ್ಸಿನಿಂದ ಮನಸ್ಸು ವಿಶಾಲ

    ಶಿರಸಿ: ತಪಸ್ಸು ಮಾಡುವ ಮೂಲಕ ಪ್ರತಿಯೊಬ್ಬರೂ ಯಶಸ್ಸು ಕಂಡುಕೊಳ್ಳಬಹುದು. ತಪಸ್ಸಿನಿಂದ ಮನಸ್ಸು ವಿಶಾಲಗೊಳ್ಳುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
    ಸೋಂದಾ ಸ್ವರ್ಣವಲ್ಲಿ ಮಠದಲ್ಲಿ 33ನೇ ಚಾತುರ್ಮಾಸ್ಯ ವ್ರತ ಸಂಕಲ್ಪದ ಸಭಾಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವ್ಯಾಸ ಎಂದರೆ ವಿಸ್ತಾರ ಎಂದರ್ಥ. ವ್ಯಾಸ ಮಹರ್ಷಿಗಳು ವಿಸ್ತಾರವಾದ ವ್ಯಕ್ತಿತ್ವವುಳ್ಳವರು. ಗುರುವಾದವರು ತಪಸ್ಸು ಮಾಡಬೇಕು. ವ್ಯಾಸರು ರಚಿಸಿದ ಕಾವ್ಯಗಳು ಬಹಳ ಪ್ರಸಿದ್ಧವಾಗಿದೆ. ಇವು ಪ್ರಪಂಚದ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯಾಗಿದೆ. ಶಂಕರಾಚಾರ್ಯರು ಹಾಗೂ ವ್ಯಾಸರು ರಚಿಸಿದ ಗ್ರಂಥಗಳೇ ನಮ್ಮ ಧಾರ್ಮಿಕ ಪರಂಪರೆಗೆ ಮೂಲಾಧಾರವಾಗಿದೆ. ಹಿಂದು ಧರ್ಮಕ್ಕೆ ಇವರ ಕೊಡುಗೆ ಅಪಾರವಾಗಿದೆ. ಹಿಂದು ಧರ್ಮದಲ್ಲಿ ಗುರುವಿಗೆ ಇರುವ ಮಹತ್ವ ಬೇರೆ ಯಾವ ಧರ್ಮದಲ್ಲೂ ಇಲ್ಲ. ಗುರು ಪೂರ್ಣಿಮೆ ಹಿಂದುಗಳಿಗೆ ಪವಿತ್ರವಾದ ದಿನವಾಗಿದೆ. ಮೂರ್ತಿ ಪೂಜೆ ಇಲ್ಲದೆ ಭಕ್ತಿ ಬೆಳೆಯುವುದಿಲ್ಲ. ಭಕ್ತಿ ಇಲ್ಲದಿದ್ದರೆ ಪರಿಪೂರ್ಣ ಏಕಾಗ್ರತೆ ಬರುವುದಿಲ್ಲ. ಮೂರ್ತಿ ಪೂಜೆ ಮಾಡುವ ಮೂಲಕ ಭಕ್ತಿ ಮಾರ್ಗದಲ್ಲಿ ನಾವು ಮುನ್ನಡೆಯಬೇಕು. ಶ್ರೇಷ್ಠವಾದ ಹಿಂದು ಧರ್ಮವನ್ನು ಉಳಿಸಿ ಎಂದು ಹೇಳುವ ಸಮಯ ಬಂದಿದೆ. ಹಿಂದು ಧರ್ಮ ಬಹಳ ಕಷ್ಟದಲ್ಲಿದೆ. ಎಲ್ಲರೂ ಸೇರಿ ಸತ್ವ ಪರಿಪೂರ್ಣವಾದ ಧರ್ಮವನ್ನು ರಕ್ಷಿಸೋಣ ಎಂದರು. ಈ ಸಂದರ್ಭದಲ್ಲಿ ಶ್ರೀಗಳು ರಚಿಸಿದ ಗುರುವಾಣಿ ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ದಾವಣಗೆರೆಯ ಖ್ಯಾತ ವೈದ್ಯ ಡಾ.ಎಸ್.ಆರ್. ಹೆಗಡೆ, ದಕ್ಷ ಆಡಳಿತಗಾರ ರಘುಪತಿ ಭಟ್ ಸುಗಾವಿ ಹಾಗೂ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಶ್ರೀಗಳು ಸನ್ಮಾನಿಸಿದರು. ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts