ಬೈಕ್ ಡಿಕ್ಕಿಯಾಗಿ ಪಾದಚಾರಿ ಗಂಭೀರ

accident
Published on

ಕಾಸರಗೋಡು: ಕುಂಬಳೆ ಸನಿಹದ ಪೇರಲ್ ಕಣ್ಣೂರು ನಾಟೆಕಲ್ ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಪೇರಾಲ್ ಕಣ್ಣೂರು ನಿವಾಸಿ ಅಬ್ದುಲ್ಲ(66) ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಮಸೀದಿಗೆ ತೆರಳಿ ವಾಪಸಾಗುವ ವೇಳೆ ಬೈಕ್ ಡಿಕ್ಕಿಯಾಗಿದೆ. ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರ ಪೇರಾಲ್ ನಿವಾಸಿ ತೇಜಸ್ ಎಂಬುವರಿಗೂ ಗಾಯಗಳುಂಟಾಗಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net