ಅಪಘಾತದಲ್ಲಿ ಬೈಕ್ ಸವಾರ ಸಾವು

accident logo
Published on

ನ್ಯಾಮತಿ: ತಾಲೂಕಿನ ಸವಳಂಗ-ನ್ಯಾಮತಿ ರಸ್ತೆಯ ಸಾಲಬಾಳು ಗ್ರಾಮದ ಬಳಿ ಬುಧವಾರ ಸಂಜೆ ಟಾಟಾ ಏಸ್ ಮತ್ತು ಟಿವಿಎಸ್ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಶಿವಮೊಗ್ಗ ಮೂಲದ ಅರಕೆರೆ ಗ್ರಾಮದ ತಿಮ್ಮಯ್ಯ (58) ಮೃತ ವ್ಯಕ್ತಿ.

ಬೈಕ್ ಹಿಂಬದಿ ಕುಳಿತಿದ್ದ ಮಹಿಳೆಯ ಕಾಲುಮೂಳೆ ಮುರಿದಿದ್ದು, ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net