ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಗಾಯ

accident-15
Published on

ಕಾಸರಗೋಡು: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಕುಂಬಳೆ ಭಾಸ್ಕರ ನಗರದಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರರಾದ ತಾಯಿ, ಪುತ್ರಿ ಗಾಯಗೊಂಡಿದ್ದಾರೆ. ಭಾಸ್ಕರನಗರ ನಿವಾಸಿ ಸಂತೋಷ್ ಎಂಬುವರ ಪತ್ನಿ, ಕುಂಬಳೆ ಸರ್ಕಾರಿ ಸೀನಿಯರ್ ಬೇಸಿಕ್ ಶಾಲಾ ಶಿಕ್ಷಕಿ ಕನಕಲಕ್ಷ್ಮೀ, ಪುತ್ರಿ ಸಾಹಿತ್ಯ ಗಾಯಗೊಂಡಿದ್ದು, ಕುಂಬಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಲೆ ಬಿಟ್ಟು ಸ್ಕೂಟರಲ್ಲಿ ಮನೆಗೆ ತೆರಳುತ್ತಿದ್ದಾಗ ಮಂಗಳವಾರ ಸಂಜೆ ಅಪಘಾತ ಸಂಭವಿಸಿದೆ. ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಪಘಾತದ ನಂತರ ಪರಾರಿಯಾಗಿರುವ ಕಾರಿನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net