

ಗುರುಪುರ: ಭಜನೆ ದೇವರು ಮತ್ತು ಮನುಷ್ಯರ ನಡುವಿನ ಭಕ್ತಿ ವಾರ್ಗದ ಸಾಧನ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಿರ್ವ್ನಿವಾಗಿ ನಡೆಯುವಲ್ಲಿ ನಿರಂತರ ನಡೆಯುತ್ತಿದ್ದ ಭಜನೆ ಪರೋಕ್ಷ ಕಾರಣವಾಗಿದೆ ಎಂದು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಆದ್ಯಪಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನ ಪ್ರಧಾನ ಅರ್ಚಕ ಸದಾಶಿವ ಭಟ್ ಉದ್ಘಾಟಿಸಿದರು. ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸ ಸಮಿತಿ ಅಧ್ಯಕ್ಷ ಸುಜಿತ್ ಆಳ್ವ ಬೈಲು ಏತಮೊಗರುಗುತ್ತು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಆರ್‌ಎಸ್‌ಎಸ್ ಮುಖಂಡ ಪಿ.ಎಸ್. ಪ್ರಕಾಶ್, ಸದಾನಂದ ಡಿ. ಶೆಟ್ಟಿ ಸಂಕೇಶ, ಚಿತ್ರನಟ ಗಿರೀಶ್ ಎಂ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿದಾನಂದ ಆದ್ಯಪಾಡಿ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು.
20 ಲಕ್ಷ ರೂ. ದೇಣಿಗೆ
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅದಾನಿ ಸಮೂಹ ಸಂಸ್ಥೆ 20 ಲಕ್ಷ ರೂ. ದೇಣಿಗೆ ಪ್ರಕಟಿಸಿತು. ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಸಂಸ್ಥೆಯ ಅನುದಾನ ಪತ್ರವನ್ನು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಹಾಗೂ ಸದಸ್ಯರಾದ ಸುಜಿತ್ ಆಳ್ವ ಬೈಲು ಏತಮೊಗರುಗುತ್ತು ಅವರಿಗೆ ಹಸ್ತಾಂತರಿಸಿದರು.
ಹೊರೆ ಕಾಣಿಕೆ ಮೆರವಣಿಗೆ
ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಆದಿನಾಥೇಶ್ವರ ದೇವಸ್ಥಾನಕ್ಕೆ ಮಂಗಳವಾರ ಮೂಡುಬಿದಿರೆ, ಎಡಪದವು, ಕುಪ್ಪೆಪದವು, ಮುಚ್ಚೂರು, ಗಂಜಿಮಠ, ಮಳಲಿ, ಮೂಡುಶೆಡ್ಡೆ, ವಾಮಂಜೂರು, ಗುರುಪುರ, ಪೆರ್ಮಂಕಿ, ಕಾವೂರು, ಮರವೂರು, ಕಟೀಲು, ಪೆರ್ಮುದೆ, ಬಜ್ಪೆ ಮತ್ತಿತರ ಪ್ರದೇಶಗಳಿಂದ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ಸಾಗಿ ಬಂತು. ಹೊರೆಕಾಣಿಕೆ ಸಮಿತಿ ಸಂಚಾಲಕ ರವಾನಾಥ ಅತ್ತಾರ್(ಚಿತ್ತಣ್ಣ), ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಇದ್ದರು.