ರಸ್ತೆ ಬಿಟ್ಟು ತೋಟಕ್ಕಿಳಿದ ಕಾರು

Published on

ಪುತ್ತೂರು ಗ್ರಾಮಾಂತರ: ವೈದ್ಯರೊಬ್ಬರು ಚಲಾಯಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಟಕ್ಕಿಳಿದ ಘಟನೆ ಶನಿವಾರ ತಡರಾತ್ರಿ ಆರ್ಯಾಪು ಗ್ರಾಮದ ಸಂಟ್ಯಾರು ಸಮೀಪದ ಮರಿಕೆ ಸೇತುವೆಯ ಬಳಿ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರೊಬ್ಬರು ಶನಿವಾರ ರಾತ್ರಿ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಅಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net