

ಕಾರ್ಕಳ : ಕ್ರೇನ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಎಂಬಲ್ಲಿ ನಡೆದಿದೆ. ಕುಕ್ಕುಂದೂರು ಜಲದುರ್ಗಾನಗರ ನಿವಾಸಿ ಅಂಗಾರ (75) ಮೃತ ವ್ಯಕ್ತಿ.
ರಸ್ತೆಯ ಬದಿಯಲ್ಲಿ ಜೋಡುಕಟ್ಟೆ ಕಡೆಯಿಂದ ಅಯ್ಯಪ್ಪನಗರ ಕಡೆಗೆ ರಸ್ತೆ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಜೋಡುಕಟ್ಟೆಯಿಂದ ಉಡುಪಿ ಕಡೆಗೆ ಕ್ರೇನ್‌ನ್ನು ಅದರ ಚಾಲಕನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಅಂಗಾರ ಎಂಬುವರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ರಸ್ತೆಗೆ ಬಿದ್ದಿದ್ದು ವ್ಯಕ್ತಿಯ ಮೇಲೆ ಕ್ರೇನ್ ಹತ್ತಿರುವುದರ ಪರಿಣಾಮ ತಲೆ ಹಾಗೂ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿ ವ್ಯಕ್ತಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.