ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಧಿಕಾರ ಸ್ವೀಕಾರ

Arvind Srivastava
Published on

ಬೆಂಗಳೂರು: ನೈಋತ್ಯ ರೈಲ್ವೆ ವಲಯದ ನೂತನ ಪ್ರಧಾನ ವ್ಯವಸ್ಥಾಪಕರಾಗಿ ಅರವಿಂದ್​ ಶ್ರೀವಾಸ್ತವ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನ ರೈಲು ಗಾಲಿ ಕಾರ್ಖಾನೆಯ ಮುಖ್ಯ ಸಾಮಗ್ರಿ ವ್ಯವಸ್ಥಾಪಕ, ಸ್ಟೋರ್ಸ್​ (ಜಾಗೃತ) ಕಾರ್ಯನಿರ್ವಾಹಕ ನಿರ್ದೇಶಕ, ನವದೆಹಲಿ ರೈಲ್ವೆ ಮಂಡಳಿ ಮುಖ್ಯ ವಿಚಣಾ ಅಧಿಕಾರಿ ಹಾಗೂ ಕೋಲ್ಕತದ ಆಗ್ನೇಯ ರೈಲ್ವೆ ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕರಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದಾರೆ.

ವಾರಣಾಸಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಿಂದ (ಐಐಟಿ) ಬಿ.ಟೆಕ್​ (ಮೆಕಾನಿಕಲ್​ ಇಂಜಿನಿಯರಿಂಗ್​) ಪದವಿ ಪಡೆದಿದ್ದಾರೆ. 1987ರ ಬ್ಯಾಚ್​ನ ಭಾರತೀಯ ರೈಲ್ವೆ ಸ್ಟೋರ್ಸ್​ ಸರ್ವೀಸ್​ (ಐಆರ್​ಎಸ್​ಎಸ್​) ಅಧಿಕಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net