

ಕುಂದಾಪುರ: ಇತ್ತೀಚೆಗೆ ಹುತಾತ್ಮರಾದ ಹವಾಲ್ದಾರ್ ಕುಂದಾಪುರದ ಬೀಜಾಡಿಯ ಅನೂಪ್ ಪೂಜಾರಿ ಕುಟುಂಬ ಸದಸ್ಯರನ್ನು ಉಡುಪಿಯ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳ ಸಂಘದ ಸದಸ್ಯರು (ಎಸಿಸಿಇಎ) ಶುಕ್ರವಾರ ಭೇಟಿ ಮಾಡಿದ್ದು, ಈ ವೇಳೆ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಸಂಘ ವತಿಯಿಂದ ಅನೂಪ್ ಪತ್ನಿ ಮಂಜುಶ್ರೀ ಹಾಗೂ ತಾಯಿ ಚಂದು ಪೂಜಾರ‌್ತಿಗೆ 1.25 ಲಕ್ಷ ರೂ. ಹಸ್ತಾಂತರಿಸಿ ಸಾಂತ್ವನ ಹೇಳಲಾಯಿತು. ಸಂಘದ ಅಧ್ಯಕ್ಷ ಯೋಗೀಶ್ ಚಂದ್ರ, ಮಾಜಿ ಅಧ್ಯಕ್ಷ ಎಂ.ಗೋಪಾಲ ಭಟ್, ಕಾರ್ಯದರ್ಶಿ ಮಹೇಶ ಕಾಮತ್, ಸದಸ್ಯರಾದ ಶಶಿಧರ ಪಿ.ಎನ್, ಎಂ.ಡಿ.ಗಣೇಶ, ಪ್ರವೀಣ್ ಶೆಟ್ಟಿ, ದಯಾನಂದ, ನಿರಂಜನ್ ಕುಮಾರ್ ಉಪಸ್ಥಿತರಿದ್ದರು.