ಎಸಿಬಿ ಬಲೆಗೆ ಕಂಪ್ಯೂಟರ್ ಆಪರೇಟರ್

Arrest Kaidhi
Published on

ಸವಣೂರ: ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ನೀಡಲು ಫಲಾನುಭವಿಗಳಿಂದ 5ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದ ಸಮಾಜಕಲ್ಯಾಣ ಇಲಾಖೆ ಕಚೇರಿಯ ಕಂಪ್ಯೂಟರ್ ಆಪರೇಟರ್ ಬುಧವಾರ ಕಚೇರಿಯಲ್ಲಿಯೇ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಸಮಾಜಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ನೇಮಕಗೊಂಡಿದ್ದ ರಜನಿಕಾಂತ ರಾಠೋಡ ಎಸಿಬಿ ಬಲೆಗೆ ಬಿದ್ದವ.

ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನದ 3 ಲಕ್ಷ ರೂ.ಗಳ ಚೆಕ್ ನೀಡಲು ಫಲಾನುಭವಿಯಿಂದ 5ಸಾವಿರ ರೂ.ಗಳ ಲಂಚಕ್ಕೆ ಈ ನೌಕರ ಬೇಡಿಕೆಯಿಟ್ಟಿದ್ದ ಇದರಿಂದ ಬೇಸತ್ತ ಫಲಾನುಭವಿ ಮಾದಾಪುರ ಗ್ರಾಮದ ರಾಚಯ್ಯ ವಿಭೂತಿಮಠ ಎಸಿಬಿಗೆ ದೂರು ನೀಡಿದ್ದ. ಬುಧವಾರ ಹಣ ನೀಡುತ್ತಿದ್ದ ಸಮಯದಲ್ಲಿ ದಾಳಿ ಮಾಡಿದ ಎಸಿಬಿ ಡಿವೈಎಸ್​ಪಿ ಬಿ.ಆರ್. ಗೋಪಿ ನೇತೃತ್ವದ ತಂಡವು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net