ಅಕಾಡೆಮಿಗಳ ಸದಸ್ಯರ ನೇಮಕ

kannada and culture dept
Published on

ಬೆಂಗಳೂರು:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಸದಸ್ಯ ಸ್ಥಾನಕ್ಕೆ ನೇಮಗೊಂಡಿದ್ದವರಲ್ಲಿ ಡಾ. ವಿಜಯಲಕ್ಷ್ಮೀ ನಾಯಕ್, ರಾಮಮೂರ್ತಿ, ನಾಗರಾಜ್ ಶಿಲ್ಪಿ ಹಾಗೂ ಆರ್. ಶಂಕರ್ ಅವರು ಸದಸ್ಯರಾಗಿ ಮುಂದುವರೆಯಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಇವರ ನಾಮನಿರ್ದೇಶನವನ್ನು ರದ್ದುಪಡಿಸಿ, ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಿ ಇಲಾಖೆ ಅದೇಶಿಸಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಕ್ಷತಾ ಎಂ. ನಾಯಕ್ (ಮಂಗಳೂರು), ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ವಿನೋದ್ ಮೂಡಗದ್ದೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ರಾಘವೇಂದ್ರ ಕಿನ್ನಾಳ (ಕೊಪ್ಪಳ) ಹಾಗೂ ಶಿವಪ್ರಸಾದ್ (ಚನ್ನಪಟ್ಟಣ), ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿ ಎಚ್.ಎಸ್. ಮಂಜುನಾಥ್ (ಹಾಸನ) ಹಾಘೂ ಕರ್ನಾಟಕ ಬಯಲಾಟ ಅಕಾಡೆಮಿ ಹೆಚ್ಚುವರಿ ಸದಸ್ಯರಾಗಿ ಲಕ್ಷ್ಮಣ ಹಣಮಂತ ದೇಸಾರಟ್ಟಿ (ಬಾಗಲಕೋಟೆ) ಇವರನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net