

ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷ್‌ತ್ ವತಿಯಿಂದ 76ನೇ ಸ್ವಾತಂತ್ರೊೃೀತ್ಸವ ಹಿನ್ನೆಲೆಯಲ್ಲಿ ದೇಶಪ್ರೇಮ ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಸೋಮವಾರ ನಗರದಲ್ಲಿ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ. ವಿವಿಧ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ತ್ರಿವರ್ಣಧ್ವಜ ಹಿಡಿದು ಹೆಜ್ಜೆ ಹಾಕಿದರು. ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆಗಳು ಮುಗಿಲುಮುಟ್ಟಿದವು.
ನಗರದ ಎಸ್‌ಐಟಿ ಬ್ಯಾಕ್‌ಗೇಟ್ ನಿಂದ ಪ್ರಾರಂಭವಾಗಿ ಎಸ್‌ಎಸ್ ಪುರಂ ಮುಖ್ಯ ರಸ್ತೆ ಮೂಲಕ ಸಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದವರೆಗೆ 300 ಅಡಿ ಉದ್ದದ ಬೃಹತ್ ತಿರಂಗ ಹೊತ್ತ ವಿದ್ಯಾರ್ಥಿಗಳ ಜತೆಗೆ ರಾಷಟ್ರೆಧ್ವಜದ ಬಾವುಟಗಳ ಮೆರವಣಿಗೆ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾಕಿ ಜೈ ಹಾಗೂ ವಂದೇ ಮಾತರಂ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಪ್ರೇರಣಾ ಪದವಿ ಪೂರ್ವ ಕಾಲೇಜು, ಶಾರದಾಂಬ ಪದವಿ ಪೂರ್ವ ಕಾಲೇಜು, ಮಹೇಶ್ ಪದವಿ ಪೂರ್ವ ಕಾಲೇಜು, ದ ಮಾಸ್ಟರ್ ಪದವಿ ಪೂರ್ವ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪು ಪಾಟೀಲ್, ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಸ್ವಾತಂತ್ರೃಕ್ಕಾಗಿ ವೀರಾಗ್ರಣಿಗಳ ತ್ಯಾಗ ಬಲಿದಾನಗಳನ್ನು ಸ್ಮರಿಸಲು ಪ್ರತಿಯೊಬ್ಬರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಗುರುಪ್ರಸಾದ್, ಕಾರ್ಯಕರ್ತರಾದ ತೇಜಸ್,ಉದಯ, ಮಹೇಂದ್ರ, ಕೇದಾರ, ಗೌತಮ್, ಪ್ರೇರಣಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವಣ್ಣ, ಶಾರಾದಾಂಬ ಕಾಲೇಜಿನ ಆಡಳಿತ ಅಧಿಕಾರಿ ಲಕ್ಷ್ಮೀಕಾಂತ್, ಮಹೇಶ್ ಕಾಲೇಜಿನ ಪ್ರಾಂಶುಪಾಲೆ ವಿದ್ಯಾಪಟೇಲ ಉಪಸ್ಥಿತರಿದ್ದರು.