ಆತ್ಮವಿಶ್ವಾಸ ಹೆಚ್ಚಿಸಲಿದೆ ಸಮರ ಕಲೆ

Untitled design(9)
ಗಂಗಾವತಿ ಲಿಟಲ್ ಹಾಟ್ಸ್ ಶಾಲೆ ಮೈದಾನದಲ್ಲಿ ಆಯೋಜಿಸಿದ್ದ ಖೆಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲತ್(ಸಮರಕಲೆ) ಲೀಗ್ 23 ಸ್ಪರ್ಧೆಯನ್ನು ಸಂಸ್ಥೆ ಅಧ್ಯಕ್ಷ ಜಗನ್ನಾಥ ಆಲ್ಲಂಪಲ್ಲಿ ಭಾನುವಾರ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ್, ಇನ್ನರ್ ವ್ಹೀಲ್ ಕ್ಲಬ್ ತಾಲೂಕಾಧ್ಯಕ್ಷೆ ಎಂ.ಪ್ರಿಯಾಕುಮಾರಿ ಇತರರಿದ್ದರು.
Published on

ಗಂಗಾವತಿ: ದೌರ್ಜನ್ಯ ಪ್ರಕರಣ ನಿಯಂತ್ರಿಸಲು ಮಹಿಳೆಯರಿಗೆ ಸಮರ ಕಲೆ ಪೂರಕ ಎಂದು ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ ಅಧ್ಯಕ್ಷ ಜಗನ್ನಾಥ ಆಲಂಪಲ್ಲಿ ಹೇಳಿದರು.

ಸಮರ ಕಲೆ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿ

ನಗರದ ಲಿಟಲ್ ಹಾಟ್ಸ್ ಶಾಲೆ ಮೈದಾನದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ, ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ, ಲಿಟಲ್ ಹಾರ್ಟ್ಸ್ ಶಾಲೆ ಮತ್ತು ಇನ್ನರ್ ವ್ಹೀಲ್ ತಾಲೂಕು ಘಟಕ ಜಂಟಿಯಾಗಿ ಹಮ್ಮಿಕೊಂಡಿದ್ದ ಖೆಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲತ್(ಸಮರಕಲೆ) ಲೀಗ್ 23 ಸ್ಪರ್ಧೆಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸಮರ ಕಲೆ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಸಮರ ಕಲೆಯ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲಿ ಮಾನ್ಯತೆ

ಆತ್ಮವಿಶ್ವಾಸ ಹೆಚ್ಚಿಸುವ ಸಮರ ಕಲೆಯ ಸಾಧಕರಿಗೆ ಎಲ್ಲ ಕ್ಷೇತ್ರದಲ್ಲಿ ಮಾನ್ಯತೆವಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲೂ ಅವಕಾಶಗಳಿವೆ. ಹಲವು ವರ್ಷಗಳಿಂದ ಸಮರ ಕಲೆಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಚಯಿಸಲಾಗುತ್ತಿದೆ. ಸ್ಥಳೀಯ ಕ್ರೀಡಾ ಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಇನ್ನರ್ ವ್ಹೀಲ್ ಕ್ಲಬ್ ತಾಲೂಕಾಧ್ಯಕ್ಷೆ ಎಂ.ಪ್ರಿಯಾಕುಮಾರಿ ಮಾತನಾಡಿ, ವಿದ್ಯಾರ್ಥಿನಿಯರಿಗಾಗಿ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಸ್ಪರ್ಧೆಗಳನ್ನು ಮೂರು ವಿಭಾಗದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net