ಅಬೀರ ಅಂಗನವಾಡಿ ಕೇಂದ್ರ ಬಾಲಮೇಳ

New Project (18)
Published on

ಕಡಬ: ಚಿಕ್ಕ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಬಾಲಮೇಳದ ಮುಖಾಂತರ ಮಾಡಿದಾಗ ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪೂರಕವಾಗುತ್ತದೆ ಎಂದು ಬೆಳಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಂತ ಅಬೀರ ಹೇಳಿದರು.

ಬೆಳಂದೂರು ಗ್ರಾಪಂ ವ್ಯಾಪ್ತಿಯ ಅಬೀರ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಚಿತ್ರಾಂಗಿ ಕಂಡೂರು ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಗ್ರಾಮ ಪಂಚಾಯಿತಿ ಸದಸ್ಯ ಗೌರಿ ಮಾದೋಡಿ, ಅಂಗನವಾಡಿ ಕೇಂದ್ರದ ಮಾಜಿ ಕಾರ್ಯಕರ್ತೆ ಯಶೋದ ಮಾದೇರಿ, ದಿನೇಶ್ ಅಬೀರ, ಕಾವ್ಯ ಕಂಡೂರು, ಹರ್ಷಾವತಿ ಕಂಡೂರು, ಆಶಾ ಕಾರ್ಯಕರ್ತೆ ತಾರಾ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಬೇಬಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕಿ ವಾರಿಜ ಸಹಕರಿಸಿದರು.

ಅಂಗನವಾಡಿ ಕೇಂದ್ರಕ್ಕೆ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು. ಯಶೋದಾ ಮಾದೇರಿ, ಗಿರೀಶ್ ಕಾನಾವು, ಪ್ರಮೀಳಾ ಮನ್ಮಥ ಅಜಿರಂಗಳ, ಹನೀಫ್ ಅಬೀರ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net