ಅಭಿಯಾನ ಶ್ರೇಷ್ಠ ಭಾರತದ ಸಂಕೇತ

17 KAMPLI 01
ಕಂಪ್ಲಿಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಸಯಾತ್ರೆ ಮೆರವಣಿಗೆಗೆ ತಹಸೀಲ್ದಾರ್ ಶಿವರಾಜ ಚಾಲನೆ ನೀಡಿದರು. ಅಧಿಕಾರಿಗಳಾದ ಕೆ.ದುರುಗಣ್ಣ, ಆರ್.ಕೆ.ಶ್ರೀಕುಮಾರ್, ಕೆ.ಎಸ್.ಮಲ್ಲನಗೌಡ ಇತರರಿದ್ದರು.
Published on

ಕಂಪ್ಲಿ: ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮ ವೀರಯೋಧರನ್ನು ಸ್ಮರಿಸುವ ಹಿನ್ನೆಲೆಯಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಹಮ್ಮಿಕೊಂಡಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಸಯಾತ್ರೆ ಸಮಾರಂಭದಲ್ಲಿ ಮಾತನಾಡಿದರು. ದೇಶದ ನಾನಾ ಭಾಗಗಳಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಯ ರಾಷ್ಟ್ರೀಯ ಯುದ್ಧಸ್ಮಾರಕದ ಬಳಿ ನಿರ್ಮಿಸಲಿರುವ ಉದ್ಯಾನಕ್ಕೆ ಬಳಸಲಾಗುತ್ತಿದೆ. ಈ ವನವು ಏಕ ಭಾರತ ಶ್ರೇಷ್ಠ ಭಾರತದ ಸಂಕೇತವಾಗಿರಲಿದೆ ಎಂದರು.

ತಹಸೀಲ್ದಾರ್ ಶಿವರಾಜ ಮಾತನಾಡಿ, ಭಾರತವು ವಿಭಿನ್ನ ಸಂಸ್ಕೃತಿ, ಆಚಾರ ವಿಚಾರಗಳಿಂದ ಕೂಡಿದ್ದರೂ ಎಲ್ಲರೂ ಒಂದೇ ಎನ್ನುವ ಭಾವವನ್ನು ನನ್ನ ಮಣ್ಣು ನನ್ನ ದೇಶ ಅಭಿಯಾನ ಬಿಂಬಿಸುತ್ತದೆ. ರಾಷ್ಟ್ರೀಯ ಸಮಗ್ರತೆ, ಏಕತೆ, ಭಾವೈಕ್ಯತೆ ಸಾಧಿಸುವಲ್ಲಿ ಅಭಿಯಾನ ಮಾದರಿಯಾಗಿದೆ ಎಂದರು.

ಕುಂಡದಲ್ಲಿ ಸಂಗ್ರಹಿಸಿದ್ದ ಮಣ್ಣು, ಅಕ್ಕಿಯನ್ನು ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಸ್ವಯಂಸೇವಕ ಬಿ.ಧನಂಜಯ ಅವರಿಗೆ ಹಸ್ತಾಂತರಿಸಲಾಯಿತು. ಅಮೃತ ಕಳಸಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಪಂ ಇಒ ಆರ್.ಕೆ.ಶ್ರೀಕುಮಾರ್, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಕಂದಾಯ ಅಧಿಕಾರಿ ಜಗದೀಶ, ಪಿಡಿಒಗಳಾದ ಕೆ.ಎಚ್. ಶಶಿಕಾಂತ, ಹನುಮಂತಪ್ಪ, ಆರ್.ಶ್ರೀಶೈಲಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net