ವಕೀಲರ ಸಂಘದ ಅಧ್ಯಕ್ಷರಾಗಿ ಅಭಿಮನ್ಯುಕುಮಾರ್ ಆಯ್ಕೆ

ವಕೀಲರ ಸಂಘದ ಅಧ್ಯಕ್ಷರಾಗಿ ಅಭಿಮನ್ಯುಕುಮಾರ್ ಆಯ್ಕೆ
Published on

ಸೋಮವಾರಪೇಟೆ: ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಹಾಗು ನೋಟರಿ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಅವರು ಜಯಗಳಿಸಿದ್ದಾರೆ.

ಶನಿವಾರ ವಕೀಲರ ಸಂಘದ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಬಿ.ಈ.ಜಯೇಂದ್ರ, ಕಾರ್ಯದರ್ಶಿಯಾಗಿ ಬಿ.ಎಂ.ಯತೀಶ್, ಸಹ ಕಾರ್ಯದರ್ಶಿಯಾಗಿ ಎಚ್.ಎಸ್.ವೆಂಕಟೇಶ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಪಿ.ಕೆ.ಗಣಪತಿ, ಬಿ.ಎ.ಕೃಷ್ಣಕುಮಾರ್, ಕೆ.ಎಸ್.ಪದ್ಮನಾಭ, ಎ.ಆರ್.ಧರ್ಮಪ್ರಕಾಶ್ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಚ್.ಎಸ್. ಚಂದ್ರಶೇಖರ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net