ಅಧ್ಯಕ್ಷರಾಗಿ ಅಬ್ದುಲ್ ಹರ್ಷದ್ ಆಯ್ಕೆ

RemasterDirector_1a5c03258
ಪಿರಿಯಾಪಟ್ಟಣ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಹರ್ಷದ್ ಅವರನ್ನು ಸದಸ್ಯರು ಅಭಿನಂದಿಸಿದರು. ಪ್ರಕಾಶ್ ಸಿಂಗ್, ಸುವರ್ಣ, ಚಾಮರಾಜ, ಶಾಮ್, ಎಚ್.ಕೆ.ಮಂಜುನಾಥ್, ಶ್ವೇತಾ ಕುಮಾರ್, ನಿರಂಜನ್, ರವಿ, ನಾಗರತ್ನ ಇತರರು ಇದ್ದರು.
Published on

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಹರ್ಷದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಪ್ರಕಾಶ್ ಸಿಂಗ್ ನೇತೃತ್ವದಲ್ಲಿ ಶುಕ್ರವಾರ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಅಬ್ದುಲ್ ಹರ್ಷದ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಳೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಅಬ್ದುಲ್ ಹರ್ಷದ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ಕೆ.ಮಹದೇವ್ ಅವರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ನಿಂದ ದೂರವಾಗಿದ್ದರು. ಪುರಸಭೆಯಲ್ಲಿ ಬಹುಮತ ಹೊಂದಿರುವ ಜೆಡಿಎಸ್ ಪಕ್ಷದ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಅಬ್ದುಲ್ ಹರ್ಷದ್ ಆಯ್ಕೆಗೆ ಸಹಕಾರ ನೀಡಿದ್ದು ಮಂಜುನಾಥ್ ಸಿಂಗ್ ಸೂಚಕರಾಗಿದ್ದರೆ ಮತ್ತು ಪಿ.ಸಿ.ಕೃಷ್ಣ ಅನುಮೋದಕರಾಗಿದ್ದರು. ಮುಂದಿನ ನವೆಂಬರ್ ತಿಂಗಳವರೆಗೆ ಪುರಸಭಾ ಸದಸ್ಯರ ಅವಧಿ ಇರಲಿದ್ದು ಅಲ್ಲಿಯವರೆಗೂ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಕರ್ತವ್ಯ ನಿರ್ವಹಿಸಲಿದ್ದಾರೆ.

ಪುರಸಭೆ ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ಚಾಮರಾಜ, ಶಾಮ್, ಎಚ್.ಕೆ.ಮಂಜುನಾಥ್, ಶ್ವೇತಾ ಕುಮಾರ್, ನಿರಂಜನ್, ರವಿ, ನಾಗರತ್ನ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net