ಕುಂಬಳೆಯಲ್ಲಿ ಎಬಿಸಿಡಿ ಯೋಜನೆ ಪೂರ್ಣ: ಪಂಚಾಯಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಮಾಹಿತಿ

New Project (32)
Published on

ಕುಂಬಳೆ: ಕುಂಬಳೆ ಗ್ರಾ.ಪಂ. ಮಟ್ಟದಲ್ಲಿ ಎಬಿಸಿಡಿ ಯೋಜನೆ ಪೂರ್ಣಗೊಂಡಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಮಾಹಿತಿ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಪಂಗಡಗಳಿಗೆ ಅಧಿಕೃತ ದಾಖಲೆಗಳನ್ನು ಪೂರ್ಣಗೊಳಿಸಿದ ಕುಂಬಳೆ ಗ್ರಾ.ಪಂ. ಸಾಧನೆ ಬಗ್ಗೆ ಮಾಹಿತಿ ನೀಡಿದರು.

ಕುಂಬಳೆ ಅಕ್ಷಯ ಕೇಂದ್ರದ ವ್ಯವಸ್ಥಾಪಕ ವನಿತ್ ಕುಮಾರ್ ಮತ್ತು ಕಳತ್ತೂರು ಅಕ್ಷಯ ಕೇಂದ್ರಗಳ ಸಾಧನೆಗಳನ್ನು ಶ್ಲಾಸಿ ಪ್ರಶಸ್ತಿ ನೀಡಲಾಯಿತು. ಸ್ಥಳೀಯಾಡಳಿತ ಸಂಸ್ಥೆಗೆ ಜಿಲ್ಲಾಡಳಿತದ ಮೆಚ್ಚುಗೆ ಪತ್ರವನ್ನು ಪಂಚಾಯಿತಿ ಅಧ್ಯಕ್ಷರು ಮತ್ತು ಆಡಳಿತ ಸಮಿತಿ ಸದಸ್ಯರು ಸ್ವೀಕರಿಸಿದರು.

ಸಬೂರ ಎಂ., ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮಾಧವನ್ ಕೆ., ಅಕ್ಷಯ ಬ್ಲಾಕ್ ಸಂಯೋಜಕ ಎ.ವಿ.ಬಾಬು, ಪಂಚಾಯಿತಿ ಸದಸ್ಯರಾದ ಮೋಹನ, ಪುಷ್ಪಲತಾ ಶೆಟ್ಟಿ, ಸುಲೋಚನಾ, ಶೋಭಾ, ರಿಯಾಜ್ ಮೊಗ್ರಾಲ್, ಕೌಲತ್ ಬೀವಿ, ವಿದ್ಯಾ ಎನ್.ಪೈ ಮತ್ತು ಪ್ರೇಮಾವತಿ ಉಪಸ್ಥಿತರಿದ್ದರು. ಬುಡಕಟ್ಟು ವಿಸ್ತರಣಾಧಿಕಾರಿ ಕೆ.ವೀಣಾ ನಾರಾಯಣ ಸ್ವಾಗತಿಸಿದರು. ಅಕ್ಷಯ ಬ್ಲಾಕ್ ಸಂಯೋಜಕ ಕೆ.ಅಶೋಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net