ಸುಕ್ಷೇತ್ರ ಅಬ್ಬೆತುಮಕೂರು ವೈಭವದ ನವರಾತ್ರಿ ಉತ್ಸವ

G SHREE (3)
Published on

ಕಲಬುರಗಿ: ಯಾದಗಿರಿ ತಾಲೂಕಿನ ಶ್ರೀಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದಲ್ಲಿ ನವರಾತ್ರಿ ಅಂಗವಾಗಿ ಭಗಳಾಂಬಿಕಾ ದೇವಿ ಆಸ್ಥಾನದ ಸ್ಥಳದಲ್ಲಿ ಮಠದ ಪೀಠಾಧಿಪತಿ ಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನವರಾತ್ರಿ ೬ನೇ ದಿನವಾದ ಶುಕ್ರವಾರ ದೇವಿ ಪಾರಾಯಣ, ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿ ವಿಧಾನಗಳಿಂದ ನಡೆದವು.

ನವರಾತ್ರಿ ವೈಭವ ಕಣ್ಣು ತುಂಬಿಕೊಳ್ಳಲು ನಾಡಿನ ವಿವಿಧ ಸ್ಥಳಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಪಂಡಿತ ಮಲ್ಲಿಕಾರ್ಜುನ ಶಾಸ್ತಿç ಅವರಿಂದ ದೇವಿ ಪಾರಾಯಣ ನಡೆಯಿತು. ಮಠದ ಸಂಗೀತ ಬಳಗದಿಂದ ದೇವಿ ಹಾಡುಗಳು ಮನಸೂರೆಗೊಂಡವು. ಪೂಜ್ಯ ಗಂಗಾಧರ ಸ್ವಾಮಿಗಳು ದೇವಿಗೆ ದೀಪದಾರುತಿ, ಮಂಗಳಾರುತಿ, ಕರ್ಪೂರದಾರುತಿ ವೈಭವದಿಂದ ಜರುಗಿತು. ಈ ಸಂದರ್ಭದಲ್ಲಿ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠ ಕೈಲಾಸದಂತೆ ಕಂಗೊಳಿಸಿತ್ತು.

ಕಳೆದ ಆರು ದಿನಗಳಿಂದ ಮಠದ ಆವರಣ ಭಕ್ತಿ ಸಾಗರದಲ್ಲಿ ಮಿಂದೇಳುತ್ತಿದೆ. ಈ ವೇಳೆ ವಿವಿಧ ಮಠಗಳ ಪೂಜ್ಯರು ಭಾಗವಹಿಸಿದ್ದರು. ಹಿರಿಯ ರಾಜಕೀಯ ಮುಖಂಡ ಲಿಂಗಾರೆಡ್ಡಿ ಭಾಸರೆಡ್ಡಿ ನಾಲವಾರ್, ಹಿರಿಯ ಪತ್ರಕರ್ತರಾದ ಶೇಷಮೂರ್ತಿ ಅವಧಾನಿ, ಹಣಮಂತರಾವ ಭೈರಾಮಡಗಿ, ದೇವೇಂದ್ರಪ್ಪ ಅವಂಟಿ, ರಾಜಕುಮಾರ ಉದನೂರ್, ಶರಣು ಗೊಬ್ಬುರ್‌ಗೆ ಶ್ರೀಗಳು ಸನ್ಮಾನಿಸಿದರು. ಬಸವರಾಜ ಶಾಸ್ತಿç ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net