ಬೈಂದೂರು ಕಾಲೇಜಿನಲ್ಲಿ ಅಬ್ಬಕ್ಕ ಜಯಂತ್ಯೋತ್ಸವ

byn (3)
Published on

ಬೈಂದೂರು: ರಾಣಿ ಅಬ್ಬಕ್ಕ ಜಯಂತ್ಯುತ್ಸವ ಆಚರಣೆ ಸಮಿತಿ ವತಿಯಿಂದ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಣಿ ಅಬ್ಬಕ್ಕ- 500 ಜಯಂತ್ಯುತ್ಸವ ಇತ್ತೀಚೆಗೆ ನಡೆಯಿತು. ರಾಣಿ ಅಬ್ಬಕ್ಕಳ ಜೀವನ ಸಾಧನೆ, ಚರಿತ್ರೆ, ಯಶೋಗಾಥೆ ಮತ್ತು ಕೊಡುಗೆಯನ್ನು ಎಐ ಮಾದರಿ ವಿಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಅಕ್ಷತಾ ಗಿರೀಶ್, ರಾಣಿ ಅಬ್ಬಕ್ಕಳ ತತ್ವ ಆದರ್ಶಗಳ ಕುರಿತು ಮಾತನಾಡಿ ಬಳಿಕ ಸಂವಾದ ನಡೆಸಿದರು. ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಉದ್ಘಾಟಿಸಿದರು. ಜೆಸಿಐ ಬೈಂದೂರು ಸಿಟಿ ಪೂರ್ವಾಧ್ಯಕ್ಷೆ ಅನಿತಾ ಆರ್.ಕೆ., ಉದ್ಯಮಿ ಗಣೇಶ ಗಾಣಿಗ ಉಪ್ಪುಂದ, ಗೋಪಾಲ ಪೂಜಾರಿ, ಯೋಗೇಂದ್ರ ಶೆಟ್ಟಿ, ರಾಜೇಂದ್ರ ಬಿಜೂರು ಉಪಸ್ಥಿತರಿದ್ದರು. ಉಪನ್ಯಾಸಕ ನವೀನ್ ಎಚ್.ಜೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net