

ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಿಶ್ವವನ್ನೇ ರಚಿಸಿದಾತ ದೇವಶಿಲ್ಪಿ ವಿಶ್ವಕರ್ಮ. ವಿಶ್ವಕರ್ಮರ ಕೊಡುಗೆಯಿಂದ ಧಾರ್ಮಿಕ ಕ್ಷೇತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆಯಿಂದ ಕುಶಲಕರ್ಮಿಗಳು, ಬಡ ಕಾರ್ಮಿಕರಿಗೆ ವರದಾನವಾಗಿದೆ ಂದು ವಿಶ್ವ ಬ್ರಾಹ್ಮಣ ಸವಾಜ ಸೇವಾ ಸಂದ ಅಧ್ಯಕ್ಷ ಶ್ರೀಧರ ಆಚಾರ್ಯ ಹೇಳಿದರು.
ಕುಂದಾಪುರ ತಾಲೂಕು ಆಡಳಿತದಿಂದ ಪ್ರಜಾಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ರಾಜ್ಯದ ವಿಶ್ವಕರ್ಮ ನಿಗಮದಲ್ಲಿ 10 ಕೋಟಿ ರೂ.ಅನುದಾನವನ್ನು ನೂರು ಕೋಟಿ ರೂ.ಗೆ ಹೆಚ್ಚಿಸಬೇಕು. ವಿಶ್ವಕರ್ಮ ಸವಾಜದ ವಯೋವದ್ಧರಿಗೆ ಸರ್ಕಾರದಿಂದ ಪಿಂಚಣಿ ಅವಶ್ಯಕತೆಯಿದ್ದು, ರಾಜ್ಯದ ಮುಖ್ಯಮಂತ್ರಿಯಯನ್ನು ಭೇಟಿ ವಾಡಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು.
ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇವಾನಂದ, ದೈಹಿಕ ಶಿಕ್ಷಣ ಪರಿವೀಕ್ಷಕ ಸತ್ಯನಾರಾಯಣ, ಉಪ ತಹಸೀಲ್ದಾರ್‌ರಾದ ಪ್ರಕಾಶ ಪೂಜಾರಿ, ಚಂದ್ರಶೇಖರ, ವಿಶ್ವ ಬ್ರಾಹ್ಮಣ ಸವಾಜ ಸೇವಾ ಸಂದ ಪದಾಧಿಕಾರಿಗಳು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ವಿನಯ್ ಕಾರ್ಯಕ್ರಮ ನಿರೂಪಿಸಿದರು.