ಬಂಟ ಮಹಿಳಾ ಸಂಘದಿಂದ ಆಟಿದ ಕೂಟ

Aati koota
ಶ್ರೀ ದುರ್ಗಾಪರಮೇಶ್ವರಿ ಬಂಟ ಮಹಿಳಾ ಸಂಘ ಬೆಳ್ಮಣ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮವನ್ನು ಸಂಘ ಗೌರವಾಧ್ಯಕ್ಷೆ ಸರಳಾ ಸುಂದರರಾಮ ಹೆಗ್ಡೆ ಉದ್ಘಾಟಿಸಿದರು
Published on

ಕಾರ್ಕಳ: ಶ್ರೀ ದುರ್ಗಾಪರಮೇಶ್ವರಿ ಬಂಟ ಮಹಿಳಾ ಸಂಘ ಬೆಳ್ಮಣ್ ವತಿಯಿಂದ ಆಟಿದ ಕೂಟ ಇತ್ತೀಚೆಗೆ ನಡೆಯಿತು. ಸಂಘದ ಗೌರವಧ್ಯಕ್ಷೆ ಸರಳಾ ಸುಂದರರಾಮ ಹೆಗ್ಡೆ ಉದ್ಘಾಟಿಸಿದರು. ಮಣಿಪಾಲ ಉಡುಪಿ ಸಮೂಹ ಸಂಸ್ಥೆ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಆಟಿ ತಿಂಗಳ ಮಹತ್ವ ಹಾಗೂ ಆಹಾರ ಪದಾರ್ಥಗಳು ಆರೋಗ್ಯ ವಿಚಾರವಾಗಿ ಮಾಹಿತಿ ನೀಡಿದರು. ಆರ್.ಜೆ. ನಯನಾ ಆಟಿ ಕೂಟದ ಉದ್ದೇಶ ಮತ್ತು ಭಾವನಾತ್ಮಕ ಸಂಬಂಧಗಳ ಬಗ್ಗೆ ತಿಳಿಸಿದರು.

ಸಂಘದ ಸದಸ್ಯೆ ವಿಮಲಾ ಶೆಟ್ಟಿ ಹಾಗೂ ಬೆಳ್ಮಣ್ ವ್ಯವಸಾಯ ಸಂಘದ ಉದ್ಯೋಗಿ ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು. ಆಟಿದ ಕೂಟ ಪ್ರಯುಕ್ತ ನಡೆಸಿದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷೆ ಇಂದಿರಾ ಶೆಟ್ಟಿ, ವೇದಾವತಿ ಶೆಟ್ಟಿ, ಶುಭಾ ಶೆಟ್ಟಿ, ಸುರೇಖಾ ಶೆಟ್ಟಿ, ವಿಜೇತ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರೂಪರಾಣಿ ಶೆಟ್ಟಿ ಸ್ವಾಗತಿಸಿದರು. ನಿಶ್ಮಿತಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net