ಮಂಗಲ್ಪಾಡಿಯಲ್ಲಿ ಬಂಟರ ಆಟಿದ ಕೂಟ

04
Published on

ಉಪ್ಪಳ: ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ ಹಾಗೂ ಆಟಿದ ಕೂಟ ಇತ್ತೀಚೆಗೆ ಜರುಗಿತು.

ಕುತ್ತಿಕಾರ್ ಯಜಮಾನ ಕುಸುಮಾ ಸುಬ್ಬಣ್ಣ ಶೆಟ್ಟಿ ಮಹಾದ್ವಾರವನ್ನು ಜಿಲ್ಲಾ ಬಂಟರ ಭವನ ಕಟ್ಟಡ ಸಮಿತಿ ಗೌರವ ಅಧ್ಯಕ್ಷ ಕೆ.ಕೆ.ಶೆಟ್ಟಿ ಕುತ್ತಿಕಾರ್ ಉದ್ಘಾಟಿಸಿದರು. ಜಿಲ್ಲಾ ಬಂಟರ ಭವನದ ಕಟ್ಟಡ ಸಮಿತಿ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು.

ಬಂಟರ ಸಂಘ ಅಧ್ಯಕ್ಷ ಸುಬ್ಬಯ ರೈ, ಉದ್ಯಮಿ ಚೆಲ್ಲಡ್ಕ ಕೆ.ಡಿ ಶೆಟ್ಟಿ ದಡ್ಡಂಗಡಿ, ಉದ್ಯಮಿಗಳಾದ ಸಂಜೀವ ಶೆಟ್ಟಿ ತಿಂಬರ, ರವೀಂದ್ರ ಆಳ್ವ ಕಿದೂರುಗುತ್ತು, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮ ಕಜೆ, ಜಿಲ್ಲಾ ಬಂಟರ ಸಂಘ ಮಾಜಿ ಅಧ್ಯಕ್ಷ ಸದಾನಂದ ರೈ, ಜಿಲ್ಲಾ ಬಂಟರ ಸಂಘ ಮಾಜಿ ಪ್ರಧಾನ ಕಾರ್ಯದರ್ಶಿ ದಾಮೋದರ ಶೆಟ್ಟಿ, ಮಂಗಲ್ಪಾಡಿ ಮನೆ ಸುಫಲಾಚಂದ್ರ ನಾಯ್ಕ, ಕೃಷಿಕರಾದ ಚಂದ್ರಹಾಸ ಶೆಟ್ಟಿ ಕೂಳೂರು ಕನ್ಯಾನ, ಉದ್ಯಮಿ ಸಂಜೀವ ಶೆಟ್ಟಿ ತಿಂಬರ, ಬ್ರಿಗೆಡರ್ ಐ.ಎನ್.ರೈ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಬಂಟರ ಸಂಘದ ಹಿರಿಯ ಸದಸ್ಯರ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಮುಟ್ಟ, ಜಿಲ್ಲಾ ಬಂಟರ ಸಂಘ ಉಪಾಧ್ಯಕ್ಷ ಶ್ಯಾಮಲಾ ಶೆಟ್ಟಿ, ಉದ್ಯಮಿ ಪಿ.ಆರ್.ಶೆಟ್ಟಿ ಪೊಯ್ಯಲು, ಬೆಂಗಳೂರು ಬಂಟರ ಸಂಘ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಮೈಸೂರು ಬಂಟರ ಸಂಘ ಜತೆ ಕೋಶಾಧಿಕಾರಿ ಸೌಮ್ಯ ವಿ. ಶೆಟ್ಟಿ, ನಟ ರೂಪೇಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಶಿವಾಜಿ ಶೆಟ್ಟಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net