

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ಆಶ್ರಯದಲ್ಲಿ ಆಟಿಡೊಂಜಿ ಕೂಟ ಮಂಗಳವಾರ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಜಿಲ್ಲಾ ನಲಿಕೆ ಯಾನೆ ಪಾಣಾರ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಂ.ಡಿ.ವೆಂಕಪ್ಪ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಬಳಿಕ ಲಯನ್ಸ್ ಕ್ಲಬ್ ವತಿಯಿಂದ ಅವರನ್ನು ಗೌರವಿಸಲಾಯಿತು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾರಾವ್ ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಕಾರ್ಯ ಆಟಿಡೊಂಜಿ ಕೂಟದ ಮೂಲಕ ಆಗುತ್ತಿದೆ ಎಂದರು. ಜಿಲ್ಲಾ ಡೈರೆಕ್ಟರಿ ಸಂಪಾದಕಿ ಆಶಾ ಚಂದ್ರಮೋಹನ್, ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸೌಮ್ಯ ಹೆಗ್ಡೆ, ಮಲ್ಟಿಪಲ್ ಕೌನ್ಸಿಲ್ ಮಾಜಿ ಅಧ್ಯಕ್ಷ ವಸಂತ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಯೂಜಿನ್ ಲೋಬೋ, ಕ್ಲಬ್ ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ, ಸಂಚಾಲಕರಾದ ರಾಘವೇಂದ್ರ ಕಾರಂತ್, ಗೀತಾ ಜೆ.ಶೆಟ್ಟಿ, ಸಹಸಂಚಲಕರಾದ ವಾಮಯ್ಯ ಜೆ.ಕೋಟ್ಯಾನ್, ರಮೇಶ್ ಕುಲಾಲ್, ಪ್ರತಿಭಾ ಪಿ.ಶೆಟ್ಟಿ, ಲಿಯೋ ಅಧ್ಯಕ್ಷೆ ಕುಶಿ ಟಿ.ಶೆಟ್ಟಿ, ಕಾರ್ಯದರ್ಶಿ ಪೂರ್ವಿಕ್ ಆರ್.ಕೆ., ಕೋಶಾಧಿಕಾರಿ ಸ್ಪಟಿಕಾ ಎಸ್.ಆಚಾರ್ಯ ಉಪಸ್ಥಿತರಿದ್ದರು.
ಆಟಿಕಳೆಂಜ, ನೃತ್ಯ, ಎದುರುಕತೆ ಮತ್ತಿತರ ತುಳುನಾಡ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸದಸ್ಯರು ಮನೆಗಳಲ್ಲಿ ತಯಾರಿಸಿದ ತಂದ ಆಟಿ ವಿಶೇಷ ಖಾದ್ಯಗಳೊಂದಿಗೆ ಸಹಬೋಜನ ನಡೆಯಿತು.