ದೇಶ ವಿಭಜನೆಗೆ ಕಾಂಗ್ರೆಸ್ ಕಾರಣಚಿಂತಕ ಶಿಕಾರಿಪುರ ಕೃಷ್ಣಮೂರ್ತಿ ಅಭಿಮತ

mng-aug13-samvada
Published on

ಮಂಗಳೂರು: ಭಾರತದಲ್ಲಿ ದೇಶ ವಿಭಜನೆಗೆ ಹಾಗೂ ನಂತರದ ವಿದ್ಯಮಾನಗಳಿಗೆ ಕಾಂಗ್ರೆಸ್ ನೇರ ಕಾರಣ. ಕಾಂಗ್ರೆಸ್ ಮನಸ್ಸು ಮಾಡಿದರೆ ದೇಶ ವಿಭಜನೆಯನ್ನು ತಪ್ಪಿಸಬಹುದಿತ್ತು ಎಂದು ಚಿಂತಕ ಡಾ.ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.


ನಗರದ ಡೊಂಗರಕೇರಿಯ ಭುವನೇಂದ್ರ ಸಭಾಂಗಣದಲ್ಲಿ ಬುಧವಾರ ಭಾರತ ವಿಭಜನೆಯ ಕರಾಳ ದಿನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ರಾಜಕೀಯ ಮುಖಂಡ ವಿಕಾಸ್ ಪುತ್ತೂರು, ಪ್ರತ್ಯೇಕತಾವಾದ ಕೇವಲ ಮುಸ್ಲಿಂ ಲೀಗ್‌ಗೆ ಸೀಮಿತವಾಗಿಲ್ಲ. ಶೇ.40ಕ್ಕಿಂತ ಜಾಸ್ತಿ ಮುಸ್ಲಿಂ ಜನಸಂಖ್ಯೆ ಆಗಿರುವಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರಲಾರಂಭಿಸಿದೆ. ಕೇರಳದ ಮಲಪ್ಪುರಂ, ಮಲಬಾರ್ ಬಳಿಕ ಈಗ ಅಸ್ಸಾಂ, ಮಹಾರಾಷ್ಟ್ರ, ಬಿಹಾರ್, ತೆಲಂಗಾಣಗಳಲ್ಲಿ ಇದೇ ಪರಿಸ್ಥಿತಿ ಕಾಣಿಸಲಾರಂಭಿಸಿದೆ ಎಂದರು.


ಸಮನ್ವಯಕಾರ ಸುನಿಲ್ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯತೆಯ ಕೊರತೆ ಇರುವಲ್ಲಿ ಪ್ರತ್ಯೇಕತಾ ವಾದ ಕಂಡುಬರುತ್ತಿದೆ ಎಂದರು.
ಭಾರತಕ್ಕೆ ಮುಸ್ಲಿಂ ಆಕ್ರಮಣ ಜೊತೆ ಕ್ರಿಶ್ಚಿಯನ್ನರ ಆಗಮನ ಶುರುವಾದಾಗ ಆತಂಕ ಶುರುವಾಯಿತು. ನಂಬಿಕೆಗಳ ವಿರುದ್ಧ ಮುಸ್ಲಿಂ ನೇರ ಆಕ್ರಮಣ ಮಾಡಿದರೆ, ಕ್ರಿಶ್ಚಿಯನ್ನರು ವೈಚಾರಿಕತೆಯನ್ನು ಎಳೆದು ತಂದರು. ನಿಜವಾಗಿ ಕುರಾನ್ ಅರ್ಥೈಸದವರು ಧಮಾರ್ಂಧತೆಯನ್ನು
ಮಾಡುತ್ತಾರೆ ಎಂದು ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.


ಪ್ರಾಂಶುಪಾಲೆ ಅಕ್ಷತಾ ಪೈ ನಿರೂಪಿಸಿದರು. ದೇಶ ವಿಭಜನೆಯ ದುರಂತ ಕಥೆ ಸಾರುವ ಪ್ರದರ್ಶಿನಿಯನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net