ಬಂಟ್ವಾಳದಲ್ಲಿ ಆಟಿಡೊಂಜಿ ಕೂಟ

New Project (3)
Published on

ಬಂಟ್ವಾಳ: ಮಂಚಿ ಗ್ರಾಪಂ, ಚಿಲುಮೆ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಮಂಚಿ ಗ್ರಾಪಂ ಸಭಾಭವನದಲ್ಲಿ ಸೋಮವಾರ ನಡೆಯಿತು.

ಗ್ರಾಪಂ ಅಧ್ಯಕ್ಷ ಜಿ.ಎಂ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಚಿಲುಮೆ ಸಂಜೀವಿನಿ ಒಕ್ಕೂಟ ಅಧ್ಯಕ್ಷ ಆಸ್ಯಮ್ಮ, ಗ್ರಾಪಂ ಉಪಾಧ್ಯಕ್ಷೆ ಬಿ.ಗೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಶಾರದಾ, ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ, ಪಿಡಿಒ ನಿರ್ಮಲ, ಗ್ರಾಮ ಆಡಳಿತ ಅಧಿಕಾರಿ ನಾಗರಾಜ್, ಸಂಜೀವಿನಿ ಒಕ್ಕೂಟ ತಾಲೂಕು ಸಂಯೋಜಕಿ ದೀಕ್ಷಿತಾ, ಸಂಜೀವಿನಿ ಒಕ್ಕೂಟ ಮುಖ್ಯಪುಸ್ತಕ ಬರಹಗಾರ್ತಿ ಪೂರ್ಣಿಮಾ, ಮುಡಿಪು ಜನ ಶಿಕ್ಷಣ ಟ್ರಸ್ಟ್‌ನ ಸುಗ್ರಾಮ ಜಿಲ್ಲಾ ಸಂಯೋಜಕ ಚೇತನ್ ಕುಮಾರ್ ಭಾಗವಹಿಸಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಯಾಗಿ ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು. ಮಂಚಿ ಗ್ರಾಮದ ಹಿರಿಯ ಸೂಲಗಿತ್ತಿ ಬೀಪಾತುಮ್ಮ ಅವರನ್ನು ಸನ್ಮಾನಿಸಲಾಯಿತು. ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net