ವಿಟ್ಲ ಅರಮನೆ ಗದ್ದೆಯಲ್ಲಿ ಕೆಸರ್‍ಡೊಂಜಿ ದಿನ

Published on

ವಿಟ್ಲ: ಯುವವಾಹಿನಿ ವಿಟ್ಲ ಘಟಕ ಆಶ್ರಯದಲ್ಲಿ ವಿಟ್ಲ ಬಿಲ್ಲವ ಸಂಘ, ಬಿಲ್ಲವ ಮಹಿಳಾ ಘಟಕ, ವಿಟ್ಲ ಲಯನ್ಸ್ ಕ್ಲಬ್, ವಿಟ್ಲ ಪದವಿ ಪೂರ್ವ ಕಾಲೇಜು ಎನ್‌ಎಸ್‌ಎಸ್ ಘಟಕ ಸಹಯೋಗದಲ್ಲಿ ವಿಟ್ಲ ಅರಮನೆ ಗದ್ದೆಯಲ್ಲಿ ಕೆಸರ್‍ಡೊಂಜಿ ದಿನ ನಡೆಯಿತು.

ವಿಟ್ಲ ಯುವವಾಹಿನಿ ಘಟಕ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ ಅಧ್ಯಕ್ಷತೆ ವಹಿಸಿದ್ದರು. ಬಾಲಕ, ಬಾಲಕಿಯರಿಗೆ, ಪುರುಷ, ಹಾಗೂ ಮಹಿಳೆಯರ ವಿಭಾಗದಲ್ಲಿ ಕೆಸರಲ್ಲಿ ವಿವಿಧ ಗುಂಪು ಮತ್ತು ವೈಯಕ್ತಿಕ ಸ್ಪರ್ಧೆಗಳು ನಡೆದವು. ಹಿಂದು ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ವಿಟ್ಲ ಬಿಲ್ಲವ ಸಂಘ ಅಧ್ಯಕ್ಷ ಜಯಪ್ರಕಾಶ್, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ, ನೋಟರಿ ವಕೀಲ ಪದ್ಮನಾಭ ಪೂಜಾರಿ ಅಳಿಕೆ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ನರ್ಸಪ್ಪ ಪೂಜಾರಿ, ಇಂಜಿನಿಯರ್ ಭಾಸ್ಕರ್ ರೈ, ವಿಟ್ಲ ಬಿಲ್ಲವ ಸಂಘ ನಿಕಟಪೂರ್ವ ಅಧ್ಯಕ್ಷ ಮಾಧವ ಪೂಜಾರಿ ಪಟ್ಲ, ಗಿರಿಯಪ್ಪ ಪೂಜಾರಿ, ವಿಟ್ಲ ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ವನಿತಾ ಚಂದ್ರಹಾಸ, ಕುಂಡಡ್ಕ ಬಿಲ್ಲವ ಸಂಘ ಕಾರ್ಯದರ್ಶಿ ಚೇತನ್ ಮರುವಾಳ, ಉದ್ಯಮಿ ಚಂದ್ರಹಾಸ ಸುವರ್ಣ, ಪ್ರಗತಿಪರ ಜೇನು ಕೃಷಿಕ ಸುಧಾಕರ ಪೂಜಾರಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net