

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸಾಂಸ್ಕೃತಿಕ ತಂಡದಿಂದ ಆಟಿದ ಪರ್ಬ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯಗುರು ಕೆ.ಯಶವಂತ ರೈ ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳೇ ಹೆಣೆದ ತಟ್ಟಿ: ಕಾಲೇಜು ವಿದ್ಯಾರ್ಥಿಗಳು ತಟ್ಟಿ ಹೆಣೆದರು. ತೆಂಗಿನ ಗರಿ, ಸಿರಿಗಳಿಂದ ಹೂವು ರಚಿಸಿದರು. ಉಪನ್ಯಾಸಕ ರತ್ನಾಕರ ಎಸ್. ಚಿಂತನೆಯಂತೆ ವಿದ್ಯಾರ್ಥಿಗಳಾದ ಯಜ್ಞೇಶ್ ದೇವರಗದ್ದೆ, ವಿಕ್ರಂ ಗೌಡ ಕೊಣಾಜೆ, ರಂಜಿತ್ ಕೋಟೆಬಾಗಿಲು, ನಿಶಾಂತ್ ಯೇನೆಕಲ್ಲು ನೇತೃತ್ವದಲ್ಲಿ ನಿಶಾಂತ್ ಎನ್.ಕೆ., ಗಗನ್ ಯೇನೆಕಲ್ಲು, ಯೋಗೀಶ್ ಪಂಜ, ಆನಂದ ದೇವರಗದ್ದೆ, ಧನುಶ್ ಕಾಶಿಕಟ್ಟೆ ತಟ್ಟಿ ಹೆಣೆಯುವಿಕೆ, ಹೂ ರಚನೆ ಮಾಡಿದರು.
ವಿದ್ಯಾರ್ಥಿ ಯಜ್ಞೇಶ್ ಅವರ ಪಾಲಕರಾದ ಜನಾರ್ದನ ದೇವರಗದ್ದೆ, ಭಾಸ್ಕರ್ ಅರ್ಗುಡಿ, ಹೇಮಂತ್ ಅರ್ಗುಡಿ, ಕಾಲೇಜಿನ ಮಹೇಶ್ ಕೆ.ಎಚ್. ಮಾರ್ಗದರ್ಶನದೊಂದಿಗೆ ಸಹಕಾರ ನೀಡಿದ್ದರು. ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಪ್ರಾಚಾರ್ಯ ಸೋಮಶೇಖರ್ ನಾಯಕ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್., ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ತಂಡದ ಸಹಸಂಚಾಲಕ ರತ್ನಾಕರ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತುಳುನಾಡಿನ ವಿವಿಧ ನೃತ್ಯ ಪ್ರದರ್ಶಿಸಿದರು.