

ಮೂಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದ ಸ್ವಾಮಿರಾಯರ ಮಠದಲ್ಲಿ ಮಟ್ಟು ಪ್ರವೀಣ ತಂತ್ರಿ ಮತ್ತು ಉಡುಪಿಯ ಗೋಪಾಲ ಜೋಯಿಸ್ ಅವರಿಂದ ಭಾನುವಾರ ತಾಂಬೂಲ ಪ್ರಶ್ನೆ ನಡೆಯಿತು.
ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿತವಾಗಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಲಭ್ಯ ಸೂಚನೆಯಂತೆ ಶ್ರೀಕ್ಷೇತ್ರದ ನಾಗನ ಕಟ್ಟೆಯನ್ನು ಸಾಂಪ್ರದಾಯಿಕ ಚಿತ್ರಕೂಟ ರಚಿಸಿ ಪುನಃಪ್ರತಿಷ್ಠಾಪನೆ ಮತ್ತು ಅಣ್ಣಪ್ಪ ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳ ಸ್ಥಾನವನ್ನು ಜೀರ್ಣೋದ್ಧಾರಗೊಳಿಸುವಂತೆ ಅನುಜ್ಞೆ ಲಭಿಸಿತು. ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭ ಶ್ರೀ ದೇವರ ಪರಿವಾರ ಶಕ್ತಿಗಳ ಆವಾಸ ಸ್ಥಾನವನ್ನೂ ಜೀರ್ಣೋದ್ಧಾರಗೊಳಿಸುವಂತೆ ಅನುಜ್ಞೆ ಲಭಿಸಿತು. ಶ್ರೀಕ್ಷೇತ್ರದ ಅರ್ಚಕವರ್ಗ, ಆಡಳಿತ ಮಂಡಳಿ, ಭಕ್ತರು ಉಪಸ್ಥಿತರಿದ್ದರು.