

ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ನೂತನವಾಗಿ ನಿರ್ಮಾಣವಾಗಲಿರುವ ಧ್ವಜಸ್ತಂಭಕ್ಕೆ ಮರವನ್ನು ದಾನವಾಗಿ ನೀಡಿದ ಹಿರೇಬಂಡಾಡಿ ಗ್ರಾಮದ ಪಾತಾಳ ವೆಂಕಟ್ರಮಣ ಭಟ್ ಮತ್ತು ಅವರ ಪುತ್ರರಾದ ಅಂಬಾ ಪ್ರಸಾದ್ ಪಾತಾಳ, ಶ್ರೀರಾಮ ಪಾತಾಳ ಅವರಿಗೆ ಆತೂರು ದೇವಸ್ಥಾನ ವತಿಯಿಂದ ಪಾತಾಳ ಮನೆಯಲ್ಲಿ ಗೌರವಾರ್ಪಣೆ ನಡೆಯಿತು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಂ ಕೆ.ಬಿ., ಹಿರೇಬಂಡಾಡಿ ಉಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ ಶುಭಹಾರೈಸಿದರು.
ಆತೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಅರುವಾರ ಬಾಳಿಕೆ, ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಸಮಿತಿ ಸದಸ್ಯರಾದ ಸುನೀತ್‌ರಾಜ್ ಶೆಟ್ಟಿ, ಯತೀಶ್ ಗುಂಡಿಜೆ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸಿಗೆತ್ತಡಿ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸುಜಾತಾ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ ಬಡಿಲ, ವಕೀಲ ರವಿಕಿರಣ್, ಪ್ರಮುಖರಾದ ರಾಜೀವ ಸುದೆಂಗಳ, ಸಂಜೀವ ಗೌಡ ಪರಂಗಾಜೆ, ಅಶ್ವಿನ್ ಅಂಬಾ, ಸಂಜೀವ ಗೌಡ ಪಲ್ಲಡ್ಕ, ಹೇಮಾ ಮೋಹನದಾಸ್ ಶೆಟ್ಟಿ, ಕೊರಗಪ್ಪ ಗೌಡ, ಎಂ.ಜಯರಾಮ ಶೆಟ್ಟಿ ಬಡಿಲ ಮತ್ತು ಪಾತಾಳ ಕುಟುಂಬಸ್ಥರು ಉಪಸ್ಥಿತರಿದ್ದರು.