ಆಧಾರ್ ನೋಂದಣಿ, ತಿದ್ದಿಪಡಿ ಅಭಿಯಾನ

abhiyana
Published on

ಕೋಟ: ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಶನಿವಾರ ನಡೆಯಿತು.

ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾಯ ಉದ್ಘಾಟಿಸಿದರು. ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕ ನಾಗಾಂಜಿನೇಯಲು ಅಂಚೆ ಸೇವೆ ಮಾಹಿತಿ ನೀಡಿದರು.

ಉಡುಪಿ ವಿಭಾಗ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ಸಹಾಯಕ ಸಂದೇಶ್, ಅಂಚೆ ಮೇಲ್ವಿಚಾರಕ ಮಹೇಂದ್ರ ಯು.ಎಸ್., ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಖಜಾಂಜಿ ರವಿ, ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು. ದೇವೇಂದ್ರ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net