ಮುತ್ತತ್ತಿಯಲ್ಲಿ ಈಜಲು ಹೋದ ಯುವಕ ಸಾವು

4hgr4
ಎಸ್.ಟಿ.ಕಿರಣ್
Published on

ಹಲಗೂರು: ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಶುಕ್ರವಾರ ಈಜಲು ಹೋಗಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

ಹಲಗೂರು ಸಮೀಪದ ಶಾಗ್ಯ ಗ್ರಾಮದ ವಾಸಿಯಾದ ತಿಮ್ಮರಾಜು ಎಂಬುವರ ಪುತ್ರ ಎಸ್.ಟಿ.ಕಿರಣ್(21) ಮೃತಪಟ್ಟ ದುರ್ದೈವಿ. ಈತ ಬೆಂಗಳೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಗುರುವಾರದವರೆಗೂ ಮುತ್ತತ್ತಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಶುಕ್ರವಾರ ಕಿರಣ್ ಸೇರಿ ಆರು ಮಂದಿ ಸ್ನೇಹಿತರ ತಂಡ ಕಾರಿನಲ್ಲಿ ಇಲ್ಲಿಗೆ ಆಗಮಿಸಿತತು. ಸಂಜೆ 5 ಗಂಟೆಗೆ ಈ ಯುವಕರ ತಂಡ ನದಿಯಲ್ಲಿ ಈಜಲು ನೀರಿಗಿಳಿದಿದೆ. ಈ ವೇಳೆ ಕಿರಣ್ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಶನಿವಾರ ಮೃತದೇಹ ಪತ್ತೆಯಾಗಿದ್ದು, ಶವವನ್ನು ಮಳವಳ್ಳಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ನೀಡಲಾಯಿತು.

ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net