ತುಮಕೂರಲ್ಲಿ ನಿನ್ನೆ ರಾತ್ರಿ ಲಾಡ್ಜ್​ನ 3ನೇ ಮಹಡಿಯಿಂದ ಕೆಳಗೆ ಹಾರಿ ಯುವಕ ಆತ್ಮಹತ್ಯೆ

New Project(6)
Published on

ತುಮಕೂರು: ನಗರದ ಲಾಡ್ಜ್​ವೊಂದರ ಮೂರನೇ ಮಹಡಿಯಿಂದ ಕೆಳಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಮಹಾರಾಷ್ಟ್ರ ಮೂಲದ ದೈವಿಕ್ (19) ಆತ್ಮಹತ್ಯೆಗೆ ಶರಣಾದವ. ಮಹಾರಾಷ್ಟ್ರದಿಂದ‌ ಬೆಂಗಳೂರಿಗೆ ಹೋಗಲು ಬಂದಿದ್ದ ದೈವಿಕ್, ಗುರುವಾರ ಸಂಜೆ 6 ಗಂಟೆಯಲ್ಲಿ ತುಮಕೂರು ‌ನಗರದ ಬಟವಾಡಿ ಬಳಿಯಿರುವ ಎಸ್​ವಿಎಸ್ ಲಾಡ್ಜ್​ನಲ್ಲಿ ಒಬ್ಬನೆ ರೂಂ ಬಾಡಿಗೆ ಪಡೆದಿದ್ದ.

ರಾತ್ರಿ 10 ಗಂಟೆಯಲ್ಲಿ ಲಾಡ್ಜ್​​ನ‌ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರಿನ ಎನ್​ಇಪಿಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net