ಮಹಿಳೆಯೊಂದಿಗೆ ಕಲಹ, ಯುವಕ ಆತ್ಮಹತ್ಯೆ

4 vpt 2
ಸಾಗರ್.
Published on

ವಿರಾಜಪೇಟೆ: ಮಹಿಳೆಯ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದ ಯುವಕನೊಬ್ಬ ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆ.ಬೋಯಿಕೇರಿ ಮೂಲದ ವಿರಾಜಪೇಟೆ ಗಾಂಧಿನಗರದ ನಿವಾಸಿ ಸಾಗರ್ (30) ಮೃತ ಯುವಕ. ಸೆಸ್ಕ್‌ನಲ್ಲಿ ಕಂಬ ಅಳವಡಿಸುವ ಕೆಲಸ ಮಾಡುತ್ತಿದ್ದ ಈತ ಆಟೋ ರಿಕ್ಷಾವನ್ನು ಓಡಿಸುತ್ತಿದ್ದ. ಸಾಗರ್ ಕಳೆದ 8 ವರ್ಷಗಳಿಂದ ವಿವಾಹಿತ ಮಹಿಳೆಯ ಜತೆ ಜೀವನ ನಡೆಸುತ್ತಿದ್ದ. ಎರಡು ದಿನಗಳ ಹಿಂದೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟಿದೆ. ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ತೆರಳಿ ಹಿಂದಿರುಗಿದ ಸಾಗರ್ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ಬಂದು ಮಹಿಳೆಗೆ ಕರೆ ಮಾಡಿದ್ದಾನೆ. ಆದರೆ, ಪ್ರತಿಕ್ರಿಯೆ ಬಾರದ ಹಿನ್ನೆಲೆ ನೊಂದು ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಸಿಕೊಂಡು ಅಡುಗೆ ಕೋಣೆಯ ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಬ್ಬರ ನಡುವಿನ ಕಲಹದಲ್ಲಿ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಕೆಯ ಮಗ ಆಧಾರ್ ಕಾರ್ಡ್ ತರಲೆಂದು ಮನೆಗೆ ಬಂದು ನೋಡಿದ ಸಂದರ್ಭ ಸಾಗರ್ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತನ ತಾಯಿ ಎನ್.ಎನ್. ಸರೋಜಾ ಅವರು ನೀಡಿರುವ ದೂರಿನ ಅನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬ ವರ್ಗಕ್ಕೆ ಹಸ್ತಾಂತರ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net