ಅನೈತಿಕ ಸಂಬಂಧ: ರಾತ್ರೋರಾತ್ರಿ ಸಿಕ್ಕಿಬಿದ್ದ ಪೊಲೀಸ್​ ಪೇದೆಗೆ ಹಿಗ್ಗಾಮುಗ್ಗಾ ಥಳಿತ

police
Published on

ಯಾದಗಿರಿ: ಪರಸ್ತ್ರೀ ಜತೆ ನಿನ್ನೆ ರಾತ್ರಿ ಮನೆಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪೊಲೀಸ್​ ಪೇದೆಯೊಬ್ಬರಿಗೆ ಆಕೆಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಪೇದೆಯನ್ನು ಬಂಧಿಸಲಾಗಿದೆ.

ಡಿಆರ್​ ಕಾನ್​ಸ್ಟೇಬಲ್​ ಗುರಪ್ಪ ಬಂಧನಕ್ಕೊಳಗಾದವ. ಯಾದಗಿರಿ ಎಸ್​ಪಿ ಕಚೇರಿ ಸಮೀಪದಲ್ಲಿ ವಾಸವಾಗಿದ್ದ ಮಹಿಳೆ ಜತೆ ಪೊಲೀಸ್​ ಪೇದೆ ಗುರಪ್ಪಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಬುಧವಾರ ರಾತ್ರಿ ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿಗೆ ಗುರಪ್ಪ ಬಂದಿದ್ದ. ಅಷ್ಟರಲ್ಲಿ ಮನೆಗೆ ಬಂದ ಮಹಿಳೆಯ ಕುಟುಂಬಸ್ಥರು, ಪೇದೆಯ ಕೈ-ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಯ್ಯೋ ಯಾರಾದ್ರೂ ನನ್ನನ್ನು ಕಾಪಾಡಿ.. ಪ್ಲೀಸ್​ ನನ್ನನ್ನು ಬಿಟ್ಟುಬಿಡಿ... ಎಂದು ಗುರಪ್ಪ ಅಂಗಲಾಚಿದರೂ ಮಹಿಳೆಯ ಕುಟುಂಬಸ್ಥರು ಬಿಟ್ಟಿಲ್ಲ. ಸ್ಥಳೀಯ ನಿವಾಸಿಗಳೂ ಗುರಪ್ಪನ ಸಹಾಯಕ್ಕೆ ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಗುರಪ್ಪನನ್ನು ವಶಕ್ಕೆ ಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಇಷ್ಟೆಲ್ಲಾ ಬೆಳವಣಿಗೆ ಬಳಿಕ ಗುರಪ್ಪನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾದ ಮಹಿಳೆಯುವ ಪೊಲೀಸ್​​ ಠಾಣೆಯಲ್ಲಿ ಗುರಪ್ಪ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ. ಅತ್ಯಾಚಾರ ಪ್ರಕರಣದಡಿ ಗುರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net