ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದ ಮಹಿಳೆ

3RON1- pule
Published on

ರೋಣ: ದೇಶ ಕಂಡ ಆದರ್ಶ ಮಹಿಳೆ ಸಮಾಜ ಚಿಂತಕಿಯಾಗಿ ಸರಳ ಜೀವನದೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿದರು ಎಂದು ಉಪನ್ಯಾಸಕ ಶಿವಾನಂದ ಗೋಗೇರಿ ಹೇಳಿದರು.

ಮಾನವ ಬಂಧುತ್ವ ವೇದಿಕೆ ಹಾಗೂ ವಿದ್ಯಾರ್ಥಿ ಬಂಧುತ್ವ ವೇದಿಕೆಯಿಂದ ಶಾರದಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೋಣ ತಾಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ವೀರಪ್ಪ ತೆಗ್ಗಿನಮನಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಎಚ್.ಆರ್. ಹೊಸಮನಿ, ಶಿಕ್ಷಕರಾದ ಎಸ್.ಎಂ. ಪಾಟೀಲ, ಆರ್.ಬಿ. ಮಡಿವಾಳ, ರವಿ ಬಾವಿ, ಎಸ್.ಡಿ. ಹುಲ್ಲೂರ, ಎಚ್.ಆರ್. ಓಲೆಕಾರ, ಎಂ.ಆರ್. ಹೆಬ್ಬಳ್ಳಿ, ಎಂ.ಎಚ್. ಹೊಸಮನಿ, ಎಸ್.ಎಫ್. ಹುಣಸಿಮರದ, ವಿ.ಡಿ. ಮಾಳಗಿ. ಎಸ್.ಟಿ. ವಾಲ್ಮೀಕಿ, ಬಿ.ಎಚ್. ಕೊರ್ಲಹಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net