

ಸುಂಟಿಕೊಪ್ಪ: ಹೊರೂರು ಗ್ರಾಮದ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಗರ್ಭಧರಿಸಿದ ಹಸುವಿನ ಮೇಲೆ ಶನಿವಾರ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ.
ಹೊರೂರು ಗ್ರಾಮದ ಕಾಫಿ ಬೆಳೆಗಾರರಾದ ದೇವಿಪ್ರಸಾದ್ ಕಾಯರ್‌ಮಾರ್ ಅವರಿಗೆ ಸೇರಿದ ಹಸು ಗಾಯಗೊಂಡಿದೆ. ಹಸುವಿನ ಚೀರಾಟ ಕೇಳಿ ಮಾಲೀಕರು ಬಂದು ನೋಡುವಾಗ ಗೊತ್ತಾಗಿದೆ. ಹಸುವನ್ನು ಪಶು ವೈದ್ಯಕೀಯ ಆಸ್ಪತ್ರೆಯ ಆಂಬ್ಯುಲೆನ್ಸ್ ಮೂಲಕ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.