

ತೆಲಸಂಗ(ಬೆಳಗಾವಿ): ಕರೊನಾ ಎರಡನೇ ಅಲೆಯಿಂದ ಕಂಗೆಟ್ಟಿರುವ ಜನರು ತಮ್ಮನ್ನು ಸೋಂಕಿನಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿದ್ದಾರೆ.
ಅಥಣಿ ತಾಲೂಕಿನ ಬನ್ನೂರ ಗ್ರಾಮದ ಯುವಕರು ಬಾವಿಯಿಂದ ನೀರು ತಂದು ಗ್ರಾಮದ ದೇವಸ್ಥಾನಗಳನ್ನು ಸ್ವಚ್ಛ ಮಾಡುತ್ತಾ ಜನರನ್ನು ಕಾಪಾಡುವಂತೆ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿರಿ ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್ಐ ಕರೊನಾಗೆ ಬಲಿ!
ಅನೇಕ ದಿನಗಳಿಂದ ಗ್ರಾಮ ಹೊರವಲಯದ ಬಾವಿಯಿಂದ ಯುವಕರ ತಂಡ ನೀರು ತಂದು ದೇವಸ್ಥಾನಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. 50 ವರ್ಷಗಳ ಹಿಂದೆಯೂ ಮಲೇರಿಯಾ, ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಾಗಲೂ ದೇವರ ಮೊರೆ ಹೋಗಿದ್ದ ಸಂಪ್ರದಾಯ ಈ ಗ್ರಾಮದಲ್ಲಿದೆ. ಹಾಗಾಗಿ ಸ್ಥಳೀಯ ಯುವಕರು ಆ ಸಂಪ್ರದಾಯಕ್ಕೆ ಸದ್ಯ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.