ವಿಧಾನ ಪರಿಷತ್​ನ ಹಂಗಾಮಿ ಸಭಾಪತಿಯಾಗಿ ರಘುನಾಥ್ ‌ಮಲ್ಕಾಪುರೆ ನೇಮಕ

Raghunath Malkapure
Published on

ಬೆಂಗಳೂರು: ವಿಧಾನ ಪರಿಷತ್​ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ಹಿನ್ನೆಲೆ ಆ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ರಘುನಾಥ್ ‌ಮಲ್ಕಾಪುರೆ ಅವರನ್ನು ನೇಮಿಸಿ ರಾಜ್ಯಪಾಲ ತಾವರ್​ಚಂದ್ ಗೆಲ್ಹೋತ್​ ಆದೇಶಿಸಿದ್ದಾರೆ.

ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಮಂಗಳವಾರ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ವಿನಂತಿಯಂತೆ ರಾಜ್ಯಪಾಲರು ಈ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರ ಸಹಕಾರದೊಂದಿಗೆ ಸದನವನ್ನ ಪಕ್ಷಾತೀತವಾಗಿ ನಡೆಸುವೆ ಎಂದರು. ಅದನವು ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ರಘುನಾಥ್ ಮಲ್ಕಾಪುರೆ ಅವರೇ ಸಭಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net