ಸಿಮೆಂಟ್ ತುಂಬಿದ್ದ ವಾಹನ ಪಲ್ಟಿ

ಸಿಮೆಂಟ್ ತುಂಬಿದ್ದ ವಾಹನ ಪಲ್ಟಿ
Published on

ಹಾಸನ: ಹೊಳೆನರಸೀಪುರ-ಹಾಸನ ಮುಖ್ಯರಸ್ತೆಯ ಕಾಮಸಮುದ್ರ ಪಾಳ್ಯ ಬಳಿ ಸಿಮೆಂಟ್ ಚೀಲ ತುಂಬಿದ ಟಾಟಾ ಏಸ್‌ವಾಹನ ಪಲ್ಟಿಯಾಗಿದೆ.

ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು, ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಸಂಚರಿಸುತ್ತಿದ್ದ ಸಂಸದ ಶ್ರೇಯಸ್ ಪಟೇಲ್ ಅವರು ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದರು. ಅಲ್ಲದೆ ಕೆಲಹೊತ್ತು ಘಟನಾ ಸ್ಥಳದಲ್ಲೇ ನಿಂತು ರಸ್ತೆಯಲ್ಲಿ ನಿಂತು ಸಿಮೆಂಟ್ ಚೀಲಗಳನ್ನು ಸ್ಥಳೀಯರಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಿಮೆಂಟ್ ತುಂಬಿದ ವಾಹನ ಪಲ್ಟಿಯಾಗಲು ಚಲಿಸುತ್ತಿದ್ದಾಗಲೇ ಟಯರ್ ಸಿಡಿದಿದ್ದು ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net