

ಬೆಂಗಳೂರು: ಸಾವು ಯಾವಾಗ? ಯಾವ ರೂಪದಲ್ಲಿ ಬರುತ್ತೆ? ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದಕ್ಕೆ ಈ ದುರಂತ ಪ್ರಕರಣವೇ ಜೀವಂತ ಸಾಕ್ಷಿ. ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಅಣಿಯಾದ ಯುವಕರಿಬ್ಬರು ಮೂತ್ರವಿಸರ್ಜನೆ ಮಾಡುವಾಗಲೇ ಮೃತಪಟ್ಟ ಘಟನೆ ನಗರದಲ್ಲಿ ಸಂಭವಿಸಿದೆ.
ಕರಿಯಪ್ಪ(22) ಮತ್ತು ನಾಗರಾಜು(19) ಮೃತ ದುದೈವಿಗಳು, ಇವರಿಬ್ಬರೂ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನವರು. ಕೆಲಸಕ್ಕಾಗಿ ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದರು. ಇದನ್ನೂ ಓದಿರಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ
ಬಿಬಿಎಎಂಪಿಯ ರಾಜಕಾಲುವೆ ಸ್ವಚ್ಛತಾ ಕಾಮಗಾರಿ ಕೆಲಸ ಮಾಡುತ್ತಿದ್ದ ಕರಿಯಪ್ಪ ಮತ್ತು ನಾಗರಾಜು ಇಬ್ಬರೂ ಸಾವಿಗೂ ಮುನ್ನ ಟಿ. ದಾಸರಹಳ್ಳಿ ಬಳಿ ಮಲ್ಲಸಂದ್ರ ರಾಜಕಾಲುವೆ ಬಳಿ ಕೆಲಸ ಮಾಡಿದ್ದರು. ಕೆಲಸ ಮುಗಿಯುತ್ತಿದ್ದಂತೆ ತಾವು ವಾಸವಿದ್ದ ಎಚ್ಎಸ್ಆರ್ ಲೇಔಟ್ಗೆ ಹೋಗಲೆಂದು ಅಲ್ಲೇ ಕೆಲಸ ಮಾಡುತ್ತಿದ್ದ ಸಂಗಡಿಗರನ್ನ ಕರೆದೊಯ್ಯಲು ಬಂದಿದ್ದರು. ಈ ವೇಳೆ ಮೂತ್ರ ವಿಸರ್ಜಿಸಲೆಂದು ನಾಲಾರಸ್ತೆಯ ರಾಜಕಾಲುವೆ ಬಳಿ ಹೋಗಿದ್ದು, ವಿದ್ಯುತ್ ರೂಪದಲ್ಲಿ ಕಾಯುತ್ತಿದ್ದ ಜವರಾಯ ಇವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.
ಕಾಲುವೆಗೆ ಅಳವಡಿಸಿದ ಮೇಷ್ಗೆ ವಿದ್ಯತ್ ಪ್ರವಹಿಸಿದ್ದು, ಇದ್ಯಾವುದರ ಪರಿವೇ ಇಲ್ಲ ಯುವಕರು ಮೂತ್ರವಿಸರ್ಜನೆ ಮಾಡಲು ಹೋದಾಗ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ.