ಶಿಕ್ಷಕನಿಗೆ ವಿನೂತನ ರೀತಿಯ ಬೀಳ್ಕೊಡುಗೆ

ಶಿಕ್ಷಕನಿಗೆ ವಿನೂತನ ರೀತಿಯ ಬೀಳ್ಕೊಡುಗೆ
Published on

ಯಳಂದೂರು: ಒಂದೇ ಶಾಲೆಯಲ್ಲಿ 31 ವರ್ಷ ಕರ್ತವ್ಯನಿರ್ವಹಿಸಿ ನಿವೃತ್ತಿ ಹೊಂದಿದ ಶಿಕ್ಷಕನಿಗೆ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಬೀಳ್ಕೊಡುಗೆ ನೀಡಿದರು.

ತಾಲೂಕಿನ ಯರಿಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿ. ಮಹದೇವ 1994ರಿಂದ ದೈಹಿಕ ಶಿಕ್ಷಣ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸಿ ಸೋಮವಾರ ನಿವೃತ್ತಿಹೊಂದಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾದ್ಯದ ಸಮೇತ ಮೆರವಣಿಗೆಯಲ್ಲಿ ಶಿಕ್ಷಕನನ್ನು ಗ್ರಾಮಸ್ಥರು ಕರೆತಂದು. ಚಿನ್ನದ ಉಂಗುರ ನೀಡಿ ಗೌರವಿಸಿದರು. ಹಳೆ ವಿದ್ಯಾರ್ಥಿಗಳು ಚಿನ್ನದ ಉಂಗುರ ಕೊಡುಗೆಯಾಗಿ ನೀಡಿದರೆ, ಗ್ರಾಮಸ್ಥರು ಹಾರ, ಪೇಟ ತೊಡಿಸಿ ಗೌರವಿಸಿದರು.

ಜಿ. ಮಹಾದೇವ ಮಾತನಾಡಿ, ನಾನು ವೃತ್ತಿ ಜೀವನ ಆರಂಭಿಸಿದ ಶಾಲೆಯಲ್ಲೇ ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ. ನನ್ನ ಬದುಕು ರೂಪಿಸಿದ ಶಾಲೆಗೆ ಹಾಗೂ ಗ್ರಾಮಕ್ಕೆ ಸದಾ ಋಣಿಯಾಗಿರುವುದಾಗಿ ಹೇಳಿದರು.

ಮುಖ್ಯ ಶಿಕ್ಷಕಿ ಯಶೋಧಾ, ಶಿಕ್ಷಕ ಸುರೇಶ್, ನಿರ್ಮಲಾ, ರಾಣಿ, ಸುಮನಾಗೇಂದ್ರ, ಉಮೇಶ್, ಮಂಜುಳಾ, ಮಮತಾ, ಉಮ್ಮೆಅಸ್ಮಾ, ಪ್ರಮುಖರಾದ ರಂಗಸ್ವಾಮಿ, ರಂಗದಾಸಯ್ಯ, ಜಯಣ್ಣ, ಮಹದೇವಯ್ಯ, ಲಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net