ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

hdk jds tumkur gowrishankar srinivas
Published on

ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಬೆಂಗಳೂರಿನ ವೈಟ್​ಫೀಲ್ಡ್​ನ ವಿವಂತಾ ಹೋಟೆಲ್​ನಲ್ಲಿ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಮತ್ತೊಂದು ಸುತ್ತಿನ ಸಭೆ ಯಶವಂತಪುರದ ತಾಜ್ ವಿವಂತಾ ಹೋಟೆಲ್​ಗೆ ಶಿಫ್ಟ್​ ಆಗಿದೆ. ಎಲ್ಲರೂ ಕಡ್ಡಾಯವಾಗಿ ಬರಬೇಕು ಎಂಬ ಸೂಚನೆ ಇದೆ. ಆದರೆ ಟ್ರಿಪ್ ನೆಪದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಶಾಸಕ ಗೌರಿಶಂಕರ್ ನಾಪತ್ತೆಯಾಗಿದ್ದಾರೆ.

ಕುಟುಂಬದ‌ ಜೊತೆ ಫಾರಿನ್ ಟ್ರಿಪ್​ನಲ್ಲಿ ಇದ್ದೀನಿ. ಫಾರಿನ್​ನಿಂದ ಇಂದು ಸಂಜೆ ಬೆಂಗಳೂರಿಗೆ ಬರುವೆ. ನಾಳೆ ಮತ ಹಾಕ್ತೀನಿ ಎಂದು ಶಾಸಕ ಗೌರಿಶಂಕರ್ ಹೇಳಿರುವುದು ಜೆಡಿಎಸ್​ನಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಲು ಕಾಂಗ್ರೆಸ್ ಸಂಚು ರೂಪಿಸಿದ್ದು, ಗೌರಿಶಂಕರ್‌ ಅವರು ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಿ ಉಲ್ಟಾ ಹೊಡೀತಾರಾ? ಎಂಬ ಆತಂಕ ಜೆಡಿಎಸ್​ಗೆ ಕಾಡುತ್ತಿದೆ.

ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಗೌರಿಶಂಕರ್ ಹಾಜರಾಗೋದು ಅನುಮಾನ ಎನ್ನುತ್ತಿವೆ ಮೂಲಗಳು. ಅತ್ತ ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಕೈಕೊಡುವ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್​ ಭದ್ರಕೋಟೆಯಂತಿದ್ದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ ಜೆಡಿಎಸ್​ ಪಾಲಿಗೆ ಮುಳ್ಳಾಗಿರುವುದಂತೂ ನಿಜ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net